Advertisement

“ಹರ್‌ ಘರ್‌ ಜಲ್‌’ಗೋವಾ ಮೊದಲಿಗ : ದೇಶದಲ್ಲಿಯೇ ವಿಶಿಷ್ಟ ಸ್ಥಾನಪಡೆದ ಬೀಚ್‌ ರಾಜ್ಯ

09:29 PM Aug 19, 2022 | Team Udayavani |

ಪಣಜಿ: ಪ್ರತಿ ಮನೆಗೆ ಪೈಪ್‌ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಗೋವಾ ಭಾರೀ ಸಾಧನೆ ಮಾಡಿದೆ.

Advertisement

“ಹರ್‌ ಘರ್‌ ಜಲ್‌’ ಯೋಜನೆಯ ಅನ್ವಯ ಗೋವಾ, ಕೇಂದ್ರಾಡಳಿತ ಪ್ರದೇಶಗಳಾಗಿರುವ ದಾದ್ರಾ ಮತ್ತು ನಗರ ಹವೇಲಿ ಮತ್ತು ದಾಮನ್‌, ಡಿಯು ದೇಶದಲ್ಲಿಯೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಅನ್ವಯ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿವೆ.

ಗೋವಾದಲ್ಲಿರುವ 2.63 ಲಕ್ಷ, ದಾದ್ರಾ ಮತ್ತು ನಗರ ಹವೇಲಿ, ದಾಮನ್‌ ಮತ್ತು ಡಿಯುನಲ್ಲಿರುವ 85,156 ಮನೆಗಳಿಗೆ ಪೈಪ್‌ ಮೂಲಕ ಶುದ್ಧ ಕುಡಿವ ನೀರು ಪೂರೈಕೆ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರು ವರ್ಷಗಳ ಅವಧಿಯಲ್ಲಿ ದೇಶದ ಏಳು ಕೋಟಿ ಗ್ರಾಮೀಣ ಮನೆಗಳಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲಾಗಿದೆ. ಇದುವರೆಗೆ ದೇಶಾದ್ಯಂತ ಒಟ್ಟು ಹತ್ತು ಕೋಟಿ ಮನೆಗಳಿಗೆ ಪೈಪ್‌ ಮೂಲಕ ಶುದ್ಧ ಕುಡಿವ ನೀರು ಪೂರೈಕೆ ಮಾಡಲಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಪ್ರಧಾನಿ “ದೇಶದ ಹಾಲಿ ಮತ್ತು ಮುಂದಿನ ದಿನಗಳ ಬಗ್ಗೆ ಕಾಳಜಿ ವಹಿಸದೇ ಇರುವವರು ಕೇವಲ ನೀರಿನ ಉಳಿತಾಯದ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ’ ಎಂದೂ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next