Advertisement

ದಕ್ಷತೆಗೆ ಪ್ರಧಾನಿ ಮೋದಿ ಗಿಫ್ಟ್; ಯಾರೀಕೆ ದಿಟ್ಟ IAS ಅಧಿಕಾರಿ

04:50 PM Mar 25, 2017 | Team Udayavani |

ಮೀರತ್: ಉತ್ತರಪ್ರದೇಶ ಮೀರತ್ ನ ಜಿಲ್ಲಾಧಿಕಾರಿ ಬಿ.ಚಂದ್ರಕಲಾ ಪ್ರಾಮಾಣಿಕ, ದಿಟ್ಟ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯ ಒಂದು ಭಾಗವಾಗುವ ಅವಕಾಶ ಐಎಎಸ್ ಅಧಿಕಾರಿ ಚಂದ್ರಕಲಾಗೆ ದೊರಕಿದೆ.

Advertisement

2008ರ ಉತ್ತರಪ್ರದೇಶ ಐಎಎಸ್ ಬ್ಯಾಚ್ ನ ಅಧಿಕಾರಿಯಾಗಿರುವ ಚಂದ್ರಕಲಾ ಕಳಪೆ ರಸ್ತೆ ಕಾಮಗಾರಿ ಮಾಡಿದ್ದಕ್ಕೆ ಸಾರ್ವಜನಿಕವಾಗಿಯೇ ಗುತ್ತಿಗೆದಾರರನ್ನು ಹಾಗೂ ಅಧಿಕಾರಿಗಳಿಗೆ ಬೆಂಡೆತ್ತಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬಿ.ಚಂದ್ರಕಲಾ ಅವರಿಗೆ ಕೊಡುಗೆ ಎಂಬಂತೆ ಸ್ವಚ್ಛ ಭಾರತ್ ಅಭಿಯಾನದ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಷ್ಟೇ ಅಲ್ಲ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಉಪಕಾರ್ಯದರ್ಶಿಯನ್ನಾಗಿಯೂ ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಸ್ವಚ್ಛ ಭಾರತ್ ಅಭಿಯಾನದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಯಾಗಿರುವ ಚಂದ್ರಕಲಾ ಅವರನ್ನು ಬುಲಂದ್ ಶಹರ್, ಬಿಜ್ನೂರ್ ಹಾಗೂ ಮೀರತ್ ನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಅವರನ್ನು ಕೇಂದ್ರದ ಸೇವೆಗೆ ನಿಯೋಜಿಸಲಾಗುವುದು ಎಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next