Advertisement
ಈ ವೇಳೆ ಕಿಸಾನ್ ಸಮ್ಮಾನ್ ಯೋಜನೆಯಡಿ 17ನೇ ಕಂತಿನಲ್ಲಿ 9.26 ಕೋಟಿ ರೈತರಿಗೆ 20 ಸಾವಿರ ಕೋಟಿ ರೂ. ಮೊತ್ತವನ್ನು ಅವರು ಬಿಡುಗಡೆ ಮಾಡಿದರು. ಕೃಷಿ ಸಖಿ ತರಬೇತಿ ಪಡೆದ 30 ಸಾವಿರ ಸ್ವಸಹಾಯ ಗುಂಪುಗಳಿಗೆ ಪ್ರಮಾಣಪತ್ರ ವಿತರಿಸಿದರು.
ಸತತ ಮೂರನೇ ಬಾರಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ವಾರಾಣಸಿಯ ಜನರಿಗೆ ಮೋದಿ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಯಾಗಿಸಿದ್ದಕ್ಕೆ ವಾರಾ ಣಸಿಯ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ.
Related Articles
Advertisement
ಗಂಗಾ ಮಾತೆಗೆನಾನು ದತ್ತು ಪುತ್ರ
ಕಾಶಿ ವಿಶ್ವನಾಥ, ಗಂಗಾ ಮಾತೆಯ ಆಶೀರ್ವಾದದಿಂದ ಹಾಗೂ ಕಾಶಿ ಜನತೆಯ ಪ್ರೀತಿಯಿಂದ 3ನೇ ಬಾರಿಗೆ ನಾನು ದೇಶದ “ಪ್ರಧಾನ ಸೇವಕ’ ನಾಗಿದ್ದೇನೆ. ಗಂಗಾ ಮಾತೆ ನನ್ನನ್ನು ದತ್ತು ಪಡೆದಿರುವಂತೆ ತೋರುತ್ತಿದೆ. ಹಾಗಾಗಿಯೇ ನಾನು ಇಲ್ಲಿಯವರಲ್ಲೇ ಒಬ್ಬನಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಕೃಷಿಸಖಿ ಸಂವಾದದಲ್ಲಿ ರಾಜ್ಯದ ಅನುಷಾ, ಲತಾ
ನೈಸರ್ಗಿಕ ಕೃಷಿ ತರಬೇತಿ ಪಡೆದಿರುವ ಕೃಷಿಸಖಿಯ ರೊಂದಿಗೆ ಮೋದಿ ನಡೆಸಿದ ಸಂವಾದದಲ್ಲಿ ಕಲಬುರಗಿ ಜಿಲ್ಲೆಯ ಕೃಷಿಸಖಿ ಅನುಷಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜಂಬೇಸಾಲ ಗ್ರಾಮದ ಲತಾ ರಾಜೀವ ಹೆಗಡೆ ಭಾಗಿಯಾಗಿದ್ದರು.