ಮುಂಬೈ: ಮುಕ್ತ ಮತ್ತು ಆರೋಗ್ಯಯುತವಾಗಿ ರುವ ಚರ್ಚೆಗಳನ್ನು ನಡೆಸಲು ಪ್ರೋತ್ಸಾಹಿಸ ಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬೈನಲ್ಲಿ ಮಂಗಳವಾರ ರಾಜಭವನದಲ್ಲಿ “ಕ್ರಾಂತಿಕಾರಿಗಳ ಗ್ಯಾಲರಿ’ ಮತ್ತು ಬಾಂಬೆ ಸಮಾಚಾರ ಪತ್ರಿಕೆಯ 200ನೇ ವರ್ಷಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ಪ್ರತೀಕಾರ-ಬ್ಯಾಂಕ್ ಮ್ಯಾನೇಜರ್ ಹತ್ಯೆಗೈದ ಉಗ್ರ ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಸಾವು
ಸ್ವಯಂ ಆಡಳಿತದಿಂದ ತೊಡಗಿ, ವಿವಿಧ ರೀತಿಯ ಸಾಮಾಜಿಕ ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲು ಮಹಾರಾಷ್ಟ್ರ ದೇಶದ ಇತರ ಭಾಗಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮರ್ಥ ರಾಮದೇವ, ಸಂತ ಧ್ಯಾನೇಶ್ವರ, ನಾಮದೇವ್ ಸೇರಿದಂತೆ ಹಲವಾರು ಮಂದಿ ಮಹನೀಯರು ದೇಶ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಪುಣೆಯ ದೇಹುವಿನಲ್ಲಿ ಜಗದ್ಗುರು ಶ್ರೀಸಂತ ತುಕಾರಾಮ ಮಹಾರಾಜ ದೇಗುಲದಲ್ಲಿ ಪ್ರಧಾನಿ ಮಂಗಳವಾರ ಕಂಡದ್ದು ಹೀಗೆ.
ಮುಂಬೈ ಕನಸುಗಳ ನಗರ ಎಂದು ಹೇಳಿದ ಪ್ರಧಾನಿ, ದೇಶದಲ್ಲಿ ಆರೋಗ್ಯಕರವಾಗಿರುವ ವಾತಾರಣದ ಚರ್ಚೆಗಳು ಉಂಟಾಗಬೇಕಾಗಿದೆ. ಆ ಪದ್ಧತಿಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದರು. ಇದಕ್ಕೂ ಮುನ್ನ ಪುಣೆ ಸಮೀಪದ ದೇಹು ಎಂಬಲ್ಲಿ ನಿರ್ಮಿಸಲಾಗಿರುವ ಸಂತ ತುಕಾರಾಮ ಮಹಾರಾಜ್ ದೇಗುಲವನ್ನು ಉದ್ಘಾಟಿಸಿದರು.