ಮೈಸೂರು: ಈ ಹಿಂದೆ ಯೋಗದ ಸಂಕೇತವು ಆಧ್ಯಾತ್ಮಿಕ ಸ್ಥಳಗಳು ಅಥವಾ ಸಾಂಪ್ರದಾಯಿಕ ಮನೆಗಳಂತಹ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇಂದು ಇದು ಜಗತ್ತಿನ ಮೂಲೆ ಮೂಲೆಯಲ್ಲಿ ಕಾಣುತ್ತಿದೆ. ಯೋಗವು ವಿಶ್ವ ಕರ್ಮವಾಗಿದೆ, ಪ್ರಪಂಚದ ಕೆಲಸವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರಿನ ಅರಮನೆ ಮೈದಾನದಲ್ಲಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಇಡೀ ವಿಶ್ವ ಸಮೂಹಕ್ಕೆ ನಾನು ನಮಸ್ಕರಿಸುತ್ತೇನೆ ಯೋಗವು ನಮಗೆ, ನಮ್ಮ ದೇಶಕ್ಕೆ, ನಮ್ಮ ಜಗತ್ತಿಗೆ ಶಾಂತಿಯನ್ನು ತರುತ್ತದೆ” ಎಂದು ಪ್ರಧಾನಿ ಅವರು, “ಯೇತ್ ಪಿಂಡೆ ತತ್ ಬ್ರಹ್ಮಾಂಡೆ” ಸಂಸ್ಕೃತದ ಹೇಳಿಕೆಯನ್ನು ಉಲ್ಲೇಖಿಸಿ, “ಯೋಗವು ನಮ್ಮನ್ನು ಜಗತ್ತಿಗೆ ಹೊಂದಿಸಲು ಅಥವಾ ಜಗತ್ತನ್ನು ನಮಗೆ ಹೊಂದಿಸಲು ಬದಲಾಯಿಸುವಂತೆ ಮಾಡುತ್ತದೆ. ಯೋಗವು ಜನರನ್ನು ಸಂಪರ್ಕಿಸುವ ವಾತಾವರಣವನ್ನು ಸೃಷ್ಟಿಸುತ್ತದೆ, ಯೋಗವು ದೇಶಗಳನ್ನು ಸಂಪರ್ಕಿಸುತ್ತದೆ, ಆ ರೀತಿಯಲ್ಲಿ ಅದು ಎಲ್ಲಾ ಸಮಸ್ಯೆಗಳ ಪರಿಹಾರಕವಾಗುತ್ತದೆ” ಎಂದರು.
ಇಂದು 75 ನಗರಗಳು, ಐತಿಹಾಸಿಕ ಸ್ಥಳಗಳು, ಸಾಂಸ್ಕೃತಿಕ ಕೇಂದ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಜ್ಞಾನಿಯಂತೆ, ತನ್ನ ಸೊಬಗು, ಸೌಹಾರ್ದಯುತವಾದ ಯೋಗದ ರಿಂಗ್‌ಗೆ ಹೆಸರುವಾಸಿಯಾದ ಮೈಸೂರು ಪ್ರಪಂಚದಾದ್ಯಂತ ಪಠಿಸಲ್ಪಡುತ್ತಿದೆ ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಿಯವರು ಮೈಸೂರಿಗೆ ಆಗಮಿಸುವ ಮೂಲಕ ಈ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪುವಂತೆ ಮಾಡಿದ್ದಾರೆ. ಇದಕ್ಕಾಗಿ ನಾನು ಪ್ರಧಾನಿಗೆ ಧನ್ಯವಾದಗಳು ಎಂದರು.
ಇಂದು ಬೆಳಗ್ಗೆ ಐತಿಹಾಸಿಕ ಸುಂದರ ಮೈಸೂರು ಅಂಬಾವಿಲಾಸ ಅರಮನೆ ಆವರಣದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 15000 ಯೋಗ ಪಟುಗಳು ಭಾಗವಹಿಸಿದ್ದರು.