Advertisement

ಮೋದಿ ಸಿನಿಮಾಕ್ಕೆ ಪ್ರೇಕ್ಷಕರ ಮೆಚ್ಚುಗೆ

01:56 AM May 26, 2019 | Sriram |

ನವದೆಹಲಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಲ್ಪಟ್ಟಿದ್ದ, ಪ್ರಧಾನಿ ನರೇಂದ್ರ ಮೋದಿಯವರ ಜೀವನದಿಂದ ಸ್ಫೂರ್ತಿ ಪಡೆದ ಚಿತ್ರ, “ಪಿಎಂ ನರೇಂದ್ರ ಮೋದಿ’,ಶುಕ್ರವಾರ ಬಿಡುಗಡೆಯಾಗಿದೆ.

Advertisement

ಮೊದಲ ದಿನದ ಪ್ರದರ್ಶನಗಳಿಂದ ದೇಶಾದ್ಯಂತ 2.28 ಕೋಟಿ ರೂ.ಗಳನ್ನು ಚಿತ್ರ ಗಳಿಸಿದೆ. ಮೊದಲೆರಡು ಶೋಗಳಿಗೆ ಪ್ರೇಕ್ಷಕರ ಸಾಧಾರಣ ಪ್ರತಿಕ್ರಿಯೆ ಕಂಡಿತ್ತು. ಆದರೆ, ಸಂಜೆಯ ಪ್ರದರ್ಶನದಿಂದ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ನಿಧಾನವಾಗಿ ಎಲ್ಲಾ ಶೋಗಳೂ ಹೌಸ್‌ಫ‌ುಲ್‌ ಪ್ರದರ್ಶನ ಕಾಣುವ ಲಕ್ಷಣ ಕಂಡುಬಂದಿವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next