Advertisement

Daily Horoscope: ವ್ಯವಹಾರಸ್ಥರಿಗೆ ಅನಿರೀಕ್ಷಿತ ಮೂಲದಿಂದ ಧನಾಗಮ

07:34 AM May 26, 2024 | Team Udayavani |

ಮೇಷ: ಹಲವು ಬಗೆಯ ಚಟುವಟಿಕೆಗಳೇ ರಜಾದಿನದ ಮುಖ್ಯ ದಿನಚರಿ. ವ್ಯವಹಾರ ಕ್ಷೇತ್ರದಿಂದಲೂ ಕರೆ ಬರುವ ಸಾಧ್ಯತೆ. ಹತ್ತಿರದ ದೇವಾಲಯಕ್ಕೆ ಭೇಟಿ. ದೂರದಲ್ಲಿರುವ ಬಂಧು ಮಿತ್ರರಿಂದ ಶುಭ ಸಮಾಚಾರ.

Advertisement

ವೃಷಭ: ಕೆಲವು ಮಂದಿಗೆ ಸಣ್ಣ ಪ್ರವಾಸ ಯೋಗ. ಕುಟುಂಬದಲ್ಲಿ ಉÇÉಾಸದ ಮನೋಭಾವ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶ. ಹವಾಮಾನ ವ್ಯತ್ಯಾಸದಿಂದ ದಿನಚರಿಯಲ್ಲಿ ಬದಲಾವಣೆ.

ಮಿಥುನ: ರಂಗಪ್ರವೇಶಕ್ಕೆ ಪೂರ್ವಸಿದ್ಧತೆ. ಅರ್ಧಮುಗಿದಿರುವ ಕೆಲಸಗಳನ್ನು ನಾಳೆ ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಸೆ.

ಕರ್ಕಾಟಕ: ಉದ್ಯೋಗಸ್ಥರಿಗೆ ಸಾಮಾನ್ಯ ನೆಮ್ಮದಿ. ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಮಿಲನ. ಉದ್ಯೋಗಾಕಾಂಕ್ಷಿ ಶಿಕ್ಷಿತರಿಗೆ ಅವಕಾಶಗಳು ಗೋಚರ. ಮಕ್ಕಳಿಗೆ ವ್ಯಾಸಂಗದಲ್ಲಿ ಸೂಕ್ತ ಮಾರ್ಗದರ್ಶನದ ಏರ್ಪಾಡು.

ಸಿಂಹ: ವ್ಯವಹಾರ ಮತ್ತು ಕಾರ್ಯ ಸುಧಾರಣೆಯ ಚಿಂತೆ. ಕಟ್ಟಡ ನಿರ್ಮಾಪಕ ರಿಗೆ ಕೆಲಸದ ಒತ್ತಡ. ಗೃಹೋತ್ಪನ್ನ ಖಾದ್ಯ ಪದಾರ್ಥಗಳಿಗೆ ಅಧಿಕ ಬೇಡಿಕೆ. ವೈದ್ಯರು, ಎಂಜಿನಿಯರರು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ.

Advertisement

ಕನ್ಯಾ: ಎಲ್ಲರ ದೇಹಾರೋಗ್ಯ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಕುಶಲಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಹತ್ತಿರದ ಪ್ರಾಕೃತಿಕ ತಾಣಕ್ಕೆ ಭೇಟಿ. ಗೃಹಿಣಿಯರು ಮತ್ತು ಮಕ್ಕಳಿಗೆ ಸಂಭ್ರಮದ ದಿನ.

ತುಲಾ: ಹಿರಿಯ ಬಂಧುವಿನಿಂದ ಮಾರ್ಗದರ್ಶನ. ಸಹೋದ್ಯೋಗಿಗಳೊಂದಿಗೆ ಸಣ್ಣ ಪ್ರವಾಸ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ಬಾಲ್ಯದ ಒಡನಾಡಿಯ ಭೇಟಿ.

ವೃಶ್ಚಿಕ: ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ಅನಿರೀಕ್ಷಿತ ಮೂಲದಿಂದ ಧನಾಗಮ. ಪರ್ಯಾಯ ಚಿಕಿತ್ಸೆಯಿಂದ ಆರೋಗ್ಯ ಪ್ರಾಪ್ತಿ. ಗೃಹಿಣಿಯರಿಗೆ, ಮಕ್ಕಳಿಗೆ ಸಂಭ್ರಮದ ದಿನ. ವಿಶೇಷ ವ್ಯಕ್ತಿಯೊಬ್ಬರ ಭೇಟಿ ಸಂಭವ.

ಧನು: ದೂರದ ನೆಂಟರ ಆಗಮನ. ಸಾಂಸಾರಿಕ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಪೀಠೊಪಕರಣ ಕೆಲಸಗಾರರಿಗೆ ಕೈತುಂಬಾ ಕೆಲಸ ಹಾಗೂ ಸಂಪಾದನೆ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.

ಮಕರ: ತಾಳ್ಮೆ, ಜಾಣ್ಮೆಗಳಿಂದ ಕಾರ್ಯದಲ್ಲಿ ಜಯ. ಚುಚ್ಚುಮಾತಿನಿಂದ ಯಾರನ್ನೂ ನೋಯಿಸದಿರಿ. ಕಾರ್ಯಕೌಶಲಕ್ಕೆ ಮೇಲಿನವರ ಮೆಚ್ಚುಗೆ. ಸಾಧನೆಯ ಮಾರ್ಗದಲ್ಲಿ ಸ್ಥಿರವಾಗಿ ಮುನ್ನಡೆ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿ.

ಕುಂಭ: ಜನಸೇವೆಯ ಹೊಸ ಅವಕಾಶ ಗಳು ಲಭ್ಯ. ಸಮಾಜದಲ್ಲಿ ಗೌರವ ವೃದ್ಧಿ. ಪರಿಸರ ನೈರ್ಮಲ್ಯ ಕಾರ್ಯಗಳಲ್ಲಿ ವಿಶೇಷ ಪಾತ್ರ. ಹಿರಿಯರಿಗೆ ಸ್ವಾವಲಂಬಿ ಬದುಕು. ಗೃಹಿಣಿಯರಿಗೆ ಸೊÌàದ್ಯೋಗದಲ್ಲಿ ಆಸಕ್ತಿ.

ಮೀನ: ಕರ್ಮಕಾರಕನಾದ ಶನಿಯಿಂದ ಸತ್ಕರ್ಮಗಳಿಗೆ ಪ್ರೇರಣೆ. ಭಗವಂತನ ಉಪಾಸನೆಯಿಂದ ಸಮಸ್ಯೆಗಳು ಪರಿಹಾರ. ಹಿತೈಷಿಯ ಭೇಟಿಯಂದ ಅನುಕೂಲ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ.

Advertisement

Udayavani is now on Telegram. Click here to join our channel and stay updated with the latest news.

Next