Advertisement

ಮಿಥಾಲಿ ಪಡೆಗೆ ಗೋಯಲ್‌ ಸನ್ಮಾನ

07:55 AM Jul 28, 2017 | |

ನವದೆಹಲಿ: ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯೆಲ್‌ ಗುರುವಾರ ದೆಹಲಿಯಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡವನ್ನು ಸನ್ಮಾನಿಸಿದರು. ಇತ್ತೀಚೆಗೆ ಇಂಗ್ಲೆಂಡ್‌ನ‌ಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ರೋಚಕ ಸೋಲನುಭವಿಸಿತ್ತು. ಟ್ರೋಫಿ ಕಳೆದುಕೊಂಡರೂ ತನ್ನ ಅತ್ಯದ್ಭುತ ಆಟದಿಂದ ಎಲ್ಲರ ಮನ ಸೆಳೆಯಲು ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಂಡವನ್ನು ಗೋಯಲ್‌ ಸನ್ಮಾನಿಸಿದ್ದಾರೆ.

Advertisement

ಈ ತಂಡದ ಸಾಧನೆ ಅದ್ಭುತವಾಗಿದೆ. ವಿಶೇಷವಾಗಿ ದೇಶದ ಸಾವಿರಾರು ಮಹಿಳೆಯರು ಕ್ರೀಡೆಯನ್ನು ತಮ್ಮ ವೃತ್ತಿಯಾಗಿ ತೆಗೆದುಕೊಳ್ಳಲು ಇದು ಪ್ರೇರಣೆಯಾಗಿದೆ.ಇತ್ತೀಚೆಗೆ ಭಾರತದ ಮಹಿಳಾ ಸ್ಪರ್ಧಿಗಳು ಎಲ್ಲ ಕ್ರೀಡೆಗಳಲ್ಲೂ ಮಿಂಚುತ್ತಿದ್ದಾರೆ. ಇದು ಭಾರತ ವಿಶ್ವಾದ್ಯಂತ ತನ್ನ ಛಾಪನ್ನು ಮೂಡಿಸಲು ನೆರವಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

10 ಆಟಗಾರ್ತಿಯರಿಗೆ
ರೈಲ್ವೇಯಿಂದ ತಲಾ 13 ಲಕ್ಷ ರೂ.

ಭಾರತ ಫೈನಲ್‌ಗೇರಿದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರೈಲ್ವೇ ಸಚಿವಾಲಯ ತನ್ನಲ್ಲಿ ಉದ್ಯೋಗಿಗಳಾಗಿರುವ 10 ಆಟಗಾರ್ತಿಯರಿಗೆ ಬಡ್ತಿ ಘೋಷಿಸಿತ್ತು. ಇದೀಗ ಆ ಆಟಗಾರ್ತಿಯರಿಗೆತಲಾ 13 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿದ್ದಾರೆ. ಒಟ್ಟಾರೆ 1.30 ಕೋಟಿ ರೂ. ವಿತರಿ ಸುವುದಾಗಿ ರೈಲ್ವೆ ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆ.

ಸಚಿವರಿಗೆ ಸಹಿಸಹಿತ ಬ್ಯಾಟ್‌ ಉಡುಗೊರೆ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಸದಸ್ಯೆಯರು ತಮ್ಮ ವಿಶ್ವಕಪ್‌ ಫೈನಲ್‌ ಸಾಧನೆಯ ನೆನಪಿಗಾಗಿ ಸಚಿವ ಗೋಯಲ್‌ಗೆ ಎಲ್ಲ ಆಟಗಾರ್ತಿಯರು ಸಹಿ ಹಾಕಿದ ಬ್ಯಾಟ್‌ ಉಡುಗೊರೆಯಾಗಿ ನೀಡಿದ್ದಾರೆ.

ಹರ್ಮನ್‌ ಅಬ್ಬರಿಸುತ್ತಿದ್ದಾಗ
ಮಿಥಾಲಿ ರಾಜ್‌ ಪುಸ್ತಕ
ಓದುತ್ತಿದ್ದರಂತೆ !

ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಅಬ್ಬರದ 171 ರನ್‌ ಬಾರಿಸಿದ್ದರು. ಆದರೆ ನಾಯಕಿ
ಮಿಥಾಲಿ ರಾಜ್‌ ಶಾಂತವಾಗಿ ಕುಳಿತು ಇಂಗ್ಲೆಂಡ್‌ ಮಾಜಿ ನಾಯಕ ನಾಸಿರ್‌ ಹುಸೇನ್‌ ಆತ್ಮಕಥನವನ್ನು
ಓದುತ್ತಿದ್ದರಂತೆ. ಪಂದ್ಯದ ವೇಳೆ ಶಾಂತಚಿತ್ತತೆಯನ್ನು ಕಾಯ್ದುಕೊಳ್ಳಲು ಮಿಥಾಲಿ ಪುಸ್ತಕ ಓದುವ ಅಭ್ಯಾಸ
ಇಟ್ಟುಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

ವೇದಾಗೆ ಸಂಗೀತ
ಕೇಳಿದರೆ ಕಾಲು ನಿಲ್ಲಲ್ಲ!

ಆಸೀಸ್‌ ವಿರುದಟಛಿ ಸೆಮಿಫೈನಲ್‌ನಲ್ಲಿ ವೇದಾ ಕೃಷ್ಣಮೂರ್ತಿ, ಮಿಥಾಲಿ ಕುಣಿಯುತ್ತಿದ್ದರು. ಇದರ ರಹಸ್ಯವನ್ನು ಮಿಥಾಲಿ ಬಿಡಿಸಿಟ್ಟಿದ್ದಾರೆ. ವೇದಾ ಉತ್ತಮ ನೃತ್ಯಪಟು. ಸಂಗೀತ ಕೇಳಿದಾಗ ತನ್ನಿಂತಾನೆ ಕುಣಿಯುತ್ತಾರೆ. ಈ ಪಂದ್ಯದಲ್ಲೂ ಹಾಗೆ ಆಯಿತು. ಆಗ ಅವರನ್ನು ನಾನೂ ಕೂಡಿಕೊಂಡೆ ಎಂದು ಮಿಥಾಲಿ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next