ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಈ ವರ್ಷದ ಮೊದಲ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 85 ನೇ ಆವೃತ್ತಿಯಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ರೈತ ಅಮೈ ಮಹಾಲಿಂಗ ನಾಯ್ಕರ ಸಾಧನೆಯನ್ನು ಕೊಂಡಾಡಿದರು.
ಮಹಾಲಿಂಗ ನಾಯ್ಕರು ಎಲ್ಲರೂ ಬೆರಗಾಗುವ ಸಾಧನೆ ಮಾಡಿದ್ದಾರೆ. ಅವರು ರೈತರಿಗೆ ಮಾದರಿಯಾಗಿದ್ದಾರೆ. ಅವರು ಪ್ರಶಸ್ತಿಗೆ ಯೋಗ್ಯವಾದ ಸಾಧನೆ ಮಾಡಿದ್ದಾರೆಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಇಂತಹ ಅನೇಕ ಹೆಸರುಗಳಿವೆ, ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ ಎಂದರು.
ದೇಶದಲ್ಲಿ ಪದ್ಮ ಪ್ರಶಸ್ತಿ ಕೂಡ ಘೋಷಣೆಯಾಗಿದೆ. ಪ್ರತಿಯೊಬ್ಬ ಪದ್ಮ ಪ್ರಶಸ್ತಿ ಪುರಸ್ಕೃತರು ನಮ್ಮ ರಾಷ್ಟ್ರ ಮತ್ತು ಸಮಾಜಕ್ಕೆ ಉತ್ಕೃಷ್ಟ ಕೊಡುಗೆಗಳನ್ನು ನೀಡಿದ್ದಾರೆ.ಇವರು ನಮ್ಮ ದೇಶದ ಅಸಾಧಾರಣ ವೀರರು, ಅವರು ಸಾಮಾನ್ಯ ಸಂದರ್ಭಗಳಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಮಣಿಪುರದ 77 ವರ್ಷದ ಲೊರೆಂಬಮ್ ಬೀನೊ ದೇವಿ ಅವರು ದಶಕಗಳಿಂದ ಮಣಿಪುರದ ಲಿಬಾ ಜವಳಿ ಕಲೆಯನ್ನು ಪೋಷಿಸಿದ್ದಾರೆ. ಇವರಿಗೆ ಪದ್ಮಶ್ರೀ ಪ್ರಶಸ್ತಿಯೂ ಸಂದಿದೆ ಎಂದು ಸಾಧಕರ ಹೆಸರುಗಳನ್ನು ನೆನಪಿಸಿದರು.
ಅಮರ್ ಜವಾನ್ ಜ್ಯೋತಿ ಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸೇರಿಸಿರುವುದು ಹುತಾತ್ಮರಿಗೆ ಒಂದು ಮಹಾನ್ ಗೌರವವಾಗಿದೆ ಎಂದು ಕೆಲವು ಅನುಭವಿಗಳು ನನಗೆ ಬರೆದಿದ್ದಾರೆ.ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ.’ಆಜಾದಿ ಕಾಮೃತ್ ಮಹೋತ್ಸವ’ದ ಭಾಗವಾಗಿ ಅನೇಕ ಪ್ರಶಸ್ತಿಗಳು ಬಾಲ ಪುರಸ್ಕಾರ, ಪದ್ಮ ಪ್ರಶಸ್ತಿಗಳನ್ನೂ ಘೋಷಿಸಲಾಗಿದೆ ಎಂದರು.
ಆಜಾದಿ ಕಾ ಅಮೃತ್ ಮಹೋತ್ಸವದ ಕುರಿತು ತಮ್ಮ ಆಲೋಚನೆಗಳನ್ನು ಬರೆದಿರುವ ಚಿಕ್ಕ ಮಕ್ಕಳಿಂದ ಒಂದು ಕೋಟಿಗೂ ಹೆಚ್ಚು ಪೋಸ್ಟ್‌ಕಾರ್ಡ್‌ಗಳನ್ನು ಪಡೆದಿದ್ದು, ಈ ಪ್ರಯತ್ನಗಳ ಮೂಲಕ, ದೇಶವು ತನ್ನ ರಾಷ್ಟ್ರೀಯ ಚಿಹ್ನೆಗಳನ್ನು ಸ್ವಾತಂತ್ರ್ಯದ ಅಮೃತದಲ್ಲಿ ಮರುಸ್ಥಾಪಿಸುತ್ತಿದೆ ಎಂದರು.