Advertisement

ಸೆಪ್ಟಂಬರ್ ತಿಂಗಳನ್ನು ಎದುರು ನೋಡುತ್ತಿದ್ದೇನೆ : ಪ್ರಧಾನಿ ಮನ್ ಕಿ ಬಾತ್

09:34 AM Jul 29, 2019 | Hari Prasad |

ನವದೆಹಲಿ: ಮೊನ್ನೆ ತಾನೆ ಭಾರತೀಯ ವಿಜ್ಞಾನಿಗಳು ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿರುವ ಸಾಧನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಕ್ತವಾಗಿ ಶ್ಲಾಘಿಸಿದ್ದಾರೆ.

Advertisement

ಆದಿತ್ಯವಾರ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ ಪ್ರಧಾನಿಯವರು ಚಂದ್ರಯಾನ -2 ರ ಯಶಸ್ಸಿಗಾಗಿ ನಾನು ಇಸ್ರೋ ವಿಜ್ಞಾನಿಗಳನ್ನು ದೇಶವಾಸಿಗಳ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು. ‘ಚಂದ್ರಯಾನ-2ರ ಕುರಿತಾಗಿ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುತ್ತಾರೆ ಮತ್ತು 2019ನೇ ಇಸವಿ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಶುಭಫಲವನ್ನೇ ತಂದುಕೊಟ್ಟಿದೆ’ ಎಂದು ಅವರು ಹೇಳಿದರು.

ಚಂದ್ರಯಾನ-2ಕ್ಕೆ ಆರಂಭಿಕ ಹಿನ್ನಡೆ ಎದುರಾದರೂ ಆ ಬಳಿಕ ಅದನ್ನು ಸರಿಪಡಿಸಿಕೊಂಡು ಕಳೆದ ಸೋಮವಾರದಂದು ಚಂದ್ರಯಾನ-2ರ ಉಡ್ಡಯನ ಯಶಸ್ವಿಯಾಗಿತ್ತು. ಇನ್ನು ಸೆಪ್ಟಂಬರ್ ತಿಂಗಳಿನಲ್ಲಿ ಈ ರಾಕೆಟ್ ಚಂದ್ರನ ಅಂಗಳವನನ್ನು ತಲುಪಲಿದೆ. ಹಾಗಾಗಿ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ ಎಂದು ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next