Advertisement
ಆ್ಯತ್ಲೀಟ್‌ಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಲು ಪ್ರಧಾನಿ ಎಂದಿಗೂ ಮರೆಯುವುದಿಲ್ಲ. ರವಿವಾರ ಕೂಡ ಆಟಗಾರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ರಲ್ಲದೇ ತವರಿಗೆ ಮರಳಿದ ಬಳಿಕ ಸಂವಾದ ನಡೆಸಲು ತನ್ನ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದರು.
ಬ್ಯಾಡ್ಮಿಂಟನ್ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು. ತಂಡವು ಇತಿಹಾಸ ನಿರ್ಮಿಸಿದೆ. ಭವಿಷ್ಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಇದು ಪ್ರೇರಣೆಯಾಗಲಿ. ಚಾಂಪಿಯನ್ನರ ಸಾಧನೆಯಿಂದ ಭಾರತ ಹೆಮ್ಮೆಪಡುವಂತೆ ಆಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
Related Articles
Advertisement
ಇದೊಂದು ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಗೆ ಐತಿಹಾಸಿಕ ದಿನ ವಾಗಿದೆ. ಬ್ಯಾಡ್ಮಿಂಟನ್ ತಂಡದಿಂದ ಅಸಾಮಾನ್ಯ ಸಾಧನೆ ದಾಖಲಾಗಿದೆ. ಹಲವು ಬಾರಿ ಕಠಿನ ಪರಿಸ್ಥಿತಿ ಎದು ರಿಸಿದರೂ ವಿಚಲಿತರಾಗದೇ ಅದ್ಭುತ ನಿರ್ವಹಣೆ ನೀಡಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಆಟಗಾರರಿಗೆ ಮತ್ತು ತರಬೇತುದಾರರಿಗೆ ಅಭಿನಂದನೆಗಳು. ನೀವೆಲ್ಲರೂ ಚಾಂಪಿಯನ್ಸ್ ಎಂದು ಒಲಿಂಪಿಕ್ ಚಿನ್ನ ಗೆದ್ದಿರುವ ಶೂಟರ್ ಅಭಿನವ್ ಬಿಂದ್ರಾ ಹೇಳಿದ್ದಾರೆ.
ಇದೊಂದು ಭಾರತೀಯ ಬ್ಯಾಡ್ಮಿಂಟನ್ ರಂಗದ ಐತಿಹಾಸಿಕ ಕ್ಷಣ ಮತ್ತು ಸಾಧನೆ ಯಾಗಿದೆ. ಭಾರತೀಯ ತಂಡಕ್ಕೆ ಅಭಿನಂದನೆಗಳು ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಯು ಹೊಸ ಎತ್ತರಕ್ಕೆ ಏರುತ್ತಿದೆ. 73 ವರ್ಷಗಳ ಥಾಮಸ್ ಕಪ್ ತಂಡ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ತಂಡಕ್ಕೆ ಅಭಿನಂದನೆಗಳು. ನಿಮ್ಮಿಂದ ನಾವೆಲ್ಲರೂ ಹೆಮ್ಮೆಪಡುವಂತಾಗಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಹಿಮಾಂತ ಬಿಸ್ವ ಶರ್ಮ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಕೂಡ ಜನಪ್ರಿಯವಾಗಲಿಬ್ಯಾಂಕಾಕ್, ಮೇ 15: ಭಾರತೀಯ ತಂಡವು 1983ರ ವಿಶ್ವಕಪ್ ಗೆದ್ದಾಗ ದೇಶವೂ ಕ್ರಿಕೆಟ್‌ಗೆ ಯಾವ ರೀತಿಯ ಪ್ರೋತ್ಸಾಹ ನೀಡಿತ್ತೋ ಆದೇ ರೀತಿ ಥಾಮಸ್ ಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಗೂ ಪ್ರೋತ್ಸಾಹ ನೀಡಲಿ ಎಂದು ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಕೋಚ್ ವಿಮಲ್ ಕುಮಾರ್ ಹಾರೈಸಿದ್ದಾರೆ. 1983ರಲ್ಲಿ ಭರಾತ ವಿಶ್ವಕಪ್ ಗೆದ್ದಾಗ ದೇಶ ದೆಲ್ಲಡೇ ವಿಜಯೋ ತ್ಸವ ಆಚರಿಸಲಾಗಿತ್ತು. ಕ್ರಿಕೆಟ್ ಜನಪ್ರಿಯ ಕ್ರೀಡೆ ಯಾಗಿರ ಬಹುದು. ಆದರೆ ಬ್ಯಾಡ್ಮಿಂಟನ್ ಆಟಗಾರರ ಈ ಸಾಧನೆಯಿಂದ ಬ್ಯಾಡ್ಮಿಂಟನ್ ಕ್ರೀಡೆಯೂ ಜನಪ್ರಿಯವಾಗಲಿ ಎಂದವರು ತಿಳಿಸಿದರು.