ನವ ದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಕೇರಳದ ವಯನಾಡಿನ ಸಂಸದ ರಾಹುಲ್ ಗಾಂಧಿ ಮತ್ತೆ ಧ್ವನಿ ಎತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೆ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ನೇಹಿತ ವರ್ಗದವರಿಗೆ ಲಾಭ ಮಾಡಿಕೊಡುವುದನ್ನು ಹೊರತಾಗಿ ಬೇರೇನೂ ಮಾಡಿಲ್ಲ ಎಂದು ಅವರು ಗರಂ ಆಗಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಕೇಂದ್ರದ ವಿರುದ್ಧ ಹರಿಯಾಯ್ದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯನ್ನೇ ನಾಶ ಮಾಡಿದೆ. ಮೋದಿ ಸರ್ಕಾರ ಉದ್ಯೋಗಕ್ಕೆ ಮಾರಕ ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ತೇಜಸ್ ಎಕ್ಸ್ ಪ್ರೆಸ್ ರೈಲಿನೊಳಗೆ ಅಂಡರ್ ವೇರ್ ಧರಿಸಿ ಓಡಾಡಿದ ಶಾಸಕ; ಪ್ರಯಾಣಿಕರ ಆಕ್ರೋಶ
ಮಾತ್ರವಲ್ಲದೇ, ತಮ್ಮ ಟ‍್ವೀಟರ್ ಖಾತೆಯ ಮೂಲಕ ಉದ್ಯಮಪತಿಗಳಾದ ಅಂಬಾನಿ ಹಾಗೂ ಅದಾನಿ ಅವರನ್ನು ಪರೋಕ್ಷವಾಗಿ ಕುಟುಕಿದ ಗಾಂಧಿ, ‘ಸ್ನೇಹಿತರಿಗೆ ಸಂಬಂಧವಲ್ಲದ’ ವ್ಯಾಪಾರ ಅಥವಾ ಉದ್ಯೋಗವನ್ನು ಕೇಂದ್ರ ಸರ್ಕಾರ ಉತ್ತೇಜಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ. ಆತ್ಮ ನಿರ್ಭರದ ನೆಪದಲ್ಲಿ ದೇಶವಾಸಿಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದಿದ್ದಲ್ಲದೇ, ಆಗಸ್ಟ್ ನಲ್ಲಿ 15 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (ಸಿಎಂಐಇ) ದತ್ತಾಂಶ ಆಧರಿಸಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಪ್ರಕಟಿಸಿರುವ ವರದಿಯ ತುಣುಕೊಂದನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.
ಇನ್ನು, ‘ತೋರಿಕೆಗಾಗಿ ಸರ್ಕಾರ ದೇಶದ ಜನರಿಂದ ಸ್ವಾಭಿಮಾನವನ್ನು ನಿರೀಕ್ಷಿಸುತ್ತಿದೆ‘ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ತೇಜಸ್ ಎಕ್ಸ್ ಪ್ರೆಸ್ ರೈಲಿನೊಳಗೆ ಅಂಡರ್ ವೇರ್ ಧರಿಸಿ ಓಡಾಡಿದ ಶಾಸಕ; ಪ್ರಯಾಣಿಕರ ಆಕ್ರೋಶ