ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ, ಬಿಡುವಿಲ್ಲದ ಕೆಲಸದ ನಡುವೆಯೂ ಪ್ರಧಾನಿಯ ಮತ್ತೊಂದು ಮಗ್ಗುಲು ಹೇಗಿದೆ ಎಂಬುದು ಆಗಸ್ಟ್ 12ರಂದು ಪ್ರಸಿದ್ಧ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗುವ “ಮ್ಯಾನ್ v/s ವೈಲ್ಡ್” ಎಂಬ ಅಡ್ವೆಂಚರ್ ಶೋನಲ್ಲಿ ಅನಾವರಣಗೊಳ್ಳಲಿದೆ.
ಡಿಸ್ಕವರಿ ಚಾನೆಲ್ ನ ಎಡ್ವರ್ಡ್ ಮೈಕೆಲ್ ಗ್ರಿಲ್ಸ್ (ಬೇರ್ ಗ್ರಿಲ್ಸ್) ಅವರ ಮ್ಯಾನ್ v/s ವೈಲ್ಡ್ ನ ಕುರಿತು ಟ್ವೀಟ್ ಮಾಡಿರುವ ಗ್ರೈಲ್ಸ್, ನೀವು(ಮೋದಿ) ಭಾರತದ ತುಂಬಾ ಮುಖ್ಯವಾದ ವ್ಯಕ್ತಿ. ನನ್ನ ವೃತ್ತಿಯನ್ನು ನೀವು ಜೀವಂತವಾಗಿಡಬೇಕು ಎಂದು ಕೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.
ಟ್ವೀಟ್ ನಲ್ಲಿ ಹೇಳಿದ್ದೇನು?
Related Articles
ವಿಶ್ವದ 180 ದೇಶಗಳಲ್ಲಿ ಇರುವ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಕುತೂಹಲಕರ ವ್ಯಕ್ತಿತ್ವ ಅನಾವರಣಗೊಳ್ಳಲಿದೆ. ಭಾರತದ ವನ್ಯಜೀವಿ ಸಂಪತ್ತಿನ ರಕ್ಷಣೆ ಮತ್ತು ಪರಿಸರ ಬದಲಾವಣೆ ಕುರಿತ ಅರಿವು ಮೂಡಿಸುವ ಮ್ಯಾನ್ v/s ವೈಲ್ಡ್ ಶೋನಲ್ಲಿ ಪ್ರಧಾನಿ ಮೋದಿ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಆಗಸ್ಟ್ 12ರ ರಾತ್ರಿ 9 ಗಂಟೆಗೆ ಡಿಸ್ಕವರಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ವೀಕ್ಷಿಸಿ ಎಂದು ವಿಡಿಯೋ ಜೊತೆ ಬೇರ್ ಗ್ರಿಲ್ಸ್ ಟ್ವೀಟ್ ಮಾಡಿದ್ದಾರೆ.
45 ಸೆಕೆಂಡುಗಳ ಸಂಕ್ಷಿಪ್ತ ವೀಡಿಯೋದಲ್ಲಿ ಪ್ರಧಾನಿ ಮೋದಿ ಗ್ರಿಲ್ಸ್ ಅವರನ್ನು ಭಾರತಕ್ಕೆ ಸ್ವಾಗತಿಸುತ್ತಿರುವುದು ದಾಖಲಾಗಿದೆ. ಅಷ್ಟೇ ಅಲ್ಲ ಪ್ರಧಾನಿ ಮೋದಿ ಅವರು ಅಭಯಾರಣ್ಯದಲ್ಲಿ ಗ್ರಿಲ್ಸ್ ಜತೆ ಬಿದಿರಿನಿಂದ ಸುತ್ತಿರುವ ವೆಪನ್ ಮತ್ತು ಅರಣ್ಯದಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಹಿಡಿದಿರುವುದು ವಿಡಿಯೋದಲ್ಲಿದೆ.