Advertisement

ಪಾಕ್ ಪ್ರತೀಕಾರ : ಸೇನೆಗೆ ಮತ್ತೆ ‘ಫ್ರೀ ಹ್ಯಾಂಡ್’ ನೀಡಿದ ಮೋದಿ

04:27 AM Feb 28, 2019 | Karthik A |

ನವದೆಹಲಿ: ಬುಧವಾರದಂದು ಪಾಕಿಸ್ಥಾನದ ಯುದ್ಧ ವಿಮಾನಗಳು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿದ ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸೇನೆಯ ಮೂರೂ ವಿಭಾಗಗಳಿಗೆ ನಿರ್ಧಾರ ತೆಗೆದುಕೊಳ್ಳುವ ‘ಮುಕ್ತ ಅವಕಾಶ’ವನ್ನು ನೀಡಿದ್ದಾರೆ. ಬುಧವಾರ ನವದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪ್ರಧಾನಿಯವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಮೂರು ಸೇನಾ ಮುಖ್ಯಸ್ಥರೊಂದಿಗೆ, ರಕ್ಷಣಾ ಸಚಿವರೊಂದಿಗೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮತ್ತು ಇತರೇ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಬೆನ್ನು ಬೆನ್ನಿಗೆ ಸಭೆಗಳನ್ನು ನಡೆಸಿದರು. ಇದು ಕಳೆದ 24 ಗಂಟೆಗಳಲ್ಲಿ ಪ್ರಧಾನಿಯವರು ನಡೆಸುತ್ತಿರುವ ಎರಡನೇ ಉನ್ನತ ಮಟ್ಟದ ಸಭೆ ಇದಾಗಿತ್ತು. ಭೂ ಸೇನೆ, ವಾಯುಸೇನೆ ಮತ್ತು ನೌಕಾದಳದ ಮುಖ್ಯಸ್ಥರು ಪ್ರಧಾನಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದು ವಿಶೇಷವಾಗಿತ್ತು.

ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಗಡಿಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ದೇಶದ ಪ್ರಮುಖ ನಗರಗಳಲ್ಲೂ ಪೊಲೀಸ್ ಮತ್ತು ಅರೆಸೇನಾಪಡೆಗಳನ್ನು ಹೈ ಅಲರ್ಟ್ ಸ್ಥಿತಿಯಲ್ಲಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next