ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನವರೆಗೂ ರೇಂಜ್ ರೋವರ್ ವೋಗ್ ಮತ್ತು ಟೋಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನು ಬಳಸುತ್ತಿದ್ದು, ಇದೀಗ ಅತ್ಯಾಧುನಿಕ, ವಿಶೇಷ ಭದ್ರತಾ ವ್ಯವಸ್ಥೆ ಹೊಂದಿರುವ ಮರ್ಸಿಡಿಸ್ ಮೇಬ್ಯಾಕ್ ಎಸ್ 650 ಗಾರ್ಡ್ ಕಾರನ್ನು ಬಳಸುತ್ತಿದ್ದಾರೆ.
ಇದನ್ನೂ ಓದಿ:ಪಂಜಾಬ್ ನಲ್ಲಿ ಕಾಂಗ್ರೆಸ್ ಶಾಸಕರ ವಲಸೆ ಪರ್ವ; ಇಬ್ಬರು ಕೈ ಶಾಸಕರು ಬಿಜೆಪಿಗೆ ಸೇರ್ಪಡೆ
ದೆಹಲಿಯ ಹೈದರಾಬಾದ್ ಹೌಸ್ ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಫೋಟ ನಿರೋಧಕ ಮರ್ಸಿಡಿಸ್ ಮೇಬ್ಯಾಕ್ ಕಾರಿನಲ್ಲಿ ಆಗಮಿಸಿದ್ದರು ಎಂದು ವರದಿ ತಿಳಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿಗೆ ಭದ್ರತೆಯ ದೃಷ್ಟಿಯಲ್ಲಿ ಬಳಸಿರುವ ವಿವಿಧ ಕಾರುಗಳನ್ನು ಗಮನಿಸಿದ್ದೇವೆ, ಇದರಲ್ಲಿ ಬಿಎಂಡಬ್ಲ್ಯು 7 ಸೀರೀಸ್ ಪ್ರಾಮುಖ್ಯತೆ ವಹಿಸಿತ್ತು. ಆದರೆ ಈ ಬಾರಿ ಪ್ರಧಾನಿಯ ಭದ್ರತೆ ವಹಿಸಿಕೊಂಡಿರುವ ಎಸ್ ಪಿಜಿ, ಅತ್ಯಾಧುನಿಕ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮರ್ಸಿಡಿಸ್ ಮೇಬ್ಯಾಕ್ ಎಸ್ 650 ಕಾರನ್ನು ಆಯ್ಕೆ ಮಾಡಿರುವುದಾಗಿ ವರದಿ ಹೇಳಿದೆ.
ಅತೀ ದುಬಾರಿ ಹಾಗೂ ಅತ್ಯಾಧುನಿಕ ವೈಶಿಷ್ಟ್ಯತೆಯ ಕಾರು:
2019ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಮೇಬ್ಯಾಕ್ 650 ಭಾರತದಲ್ಲಿ ಅತೀ ದುಬಾರಿ ಬೆಲೆಯದ್ದಾಗಿದೆ. ಮರ್ಸಿಡಿಸ್ ಮೇಬ್ಯಾಕ್ 650 ಕಾರಿನ ಅಂದಾಜು ಬೆಲೆ 12 ಕೋಟಿ ರೂಪಾಯಿ. ಇದು ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆಯನ್ನು ನೀಡಬಲ್ಲ ಕಾರು ಇದಾಗಿದೆ. ಮೇಬ್ಯಾಕ್ ಕಾರಿನ ಕಿಟಕಿ ಗಾಜು ಮತ್ತು ಕಾರಿನ ಸ್ಟೀಲ್ ಕವಚ ಗುಂಡು ನಿರೋಧಕವಾಗಿದೆ. ಎಕೆ 47 ರೈಫಲ್ ನಿಂದ ಹೊಡೆದ ಗುಂಡು ಕೂಡಾ ಮೇಬ್ಯಾಕ್ ಕಾರಿಗೆ ಯಾವುದೇ ಹಾನಿ ಮಾಡಲಾರದು. ಮೇಬ್ಯಾಕ್ ಸ್ಫೋಟಕ ನಿರೋಧಕ ವಾಹನವಾಗಿದ್ದು, ಎರಡು ಮೀಟರ್ ಅಂತರದಲ್ಲಿ ಬಾಂಬ್ ಸ್ಫೋಟಗೊಂಡರು ಕೂಡಾ ರಕ್ಷಣೆ ನೀಡಬಲ್ಲ ಸಾಮರ್ಥ್ಯ ಹೊಂದಿದೆ.
ಒಂದು ಕಾರು ಜಖಂಗೊಂಡರೆ ಅಥವಾ ಪಂಕ್ಚರ್ ಆದರೂ ಕೂಡಾ ಮರ್ಸಿಡಿಸ್ ಮೇಬ್ಯಾಕ್ ಫ್ಲ್ಯಾಟ್ ಟಯರ್ ಗಳಲ್ಲಿಯೇ ಚಲಿಸಬಲ್ಲದು. ಗ್ಯಾಸ್ ದಾಳಿ ನಡೆದರೂ ಕಾರಿನೊಳಗೆ ಪ್ರತ್ಯೇಕ ಏರ್ ಸಪ್ಲೈ ವ್ಯವಸ್ಥೆ ಇದ್ದಿರುವುದಾಗಿ ವರದಿ ವಿವರಿಸಿದೆ.