ಟೆಲ್ ಅವೀವ್ : ಮೂರು ದಿನಗಳ ಇಸ್ರೇಲ್ ಭೇಟಿ ನಿಮಿತ್ತ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಮಂಗಳವಾರ ವಿಧ್ಯುಕ್ತವಾಗಿ ಭವ್ಯತೆಯಿಂದ ಸ್ವಾಗತಿಸಿದರು.
ಬಳಿಕ ನೆತನ್ಯಾಹು ಅವರು ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಪ್ರಧಾನಿ ಮೋದಿಗೆ ಪರಿಚಯಿಸಿದರು. ‘ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆ ನನಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ, ಇಸ್ರೇಲಿಗೆ ಇದು ನನ್ನ ಸೀಮೋಲ್ಲಂಘನೆಯ ಭೇಟಿಯಾಗಿದೆ ‘ ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ಜು.6ರ ವರೆಗೆ ಇಸ್ರೇಲ್‌ನಲ್ಲಿ ಇರುತ್ತಾರೆ. ಅದಕ್ಕೆ ಮುನ್ನ ಅವರು ಜರ್ಮನಿಯ ಹ್ಯಾಂಬರ್ಗ್ ಗೆ ಪ್ರಯಾಣಿಸಿ ಅಲ್ಲಿ ಜಿ-20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಪಾಲ್ಗೊಳುತ್ತಾರೆ.
ಮೋದಿ ಅವರು ತಮ್ಮ ಇಸ್ರೇಲ್ ಭೇಟಿಯಲ್ಲಿ ಅಧ್ಯಕ್ಷ ರುವೆನ್ ರಿವಿನ್ ಅವರನ್ನೂ ಕಾಣುವರಲ್ಲದೆ ಉಭಯ ದೇಶಗಳ ಸಿಇಓಗಳನ್ನು ಹಾಗೂ ಇಂಡಿಯಾ ಡಯಾನ್ಪೋರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
1918ರ ಹೈಪಾ ವಿಮೋಚನೆಯಲ್ಲಿ ಬಲಿದಾನಗೈದ ಧೀರ ಭಾರತೀಯ ಸೈನಿಕರಿಗೆ ಮೋದಿ ಪುಷ್ಪಾಂಜಲಿ ಸಲ್ಲಿಸಲಿದ್ದಾರೆ.