Advertisement

ಮೂರನೇ ಅನೌಪಚಾರಿಕ ಶೃಂಗಸಭೆಗೆ ಚೀನ ಅಧ್ಯಕ್ಷರ ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ

09:55 AM Oct 14, 2019 | Mithun PG |

ಚೆನ್ನೈ:  ಮಹಾಬಲಿಪುರಂ ಸಾಗರ ತೀರದಲ್ಲಿ ಎರಡು ದಿನಗಳ ಕಾಲ ನಡೆದ ಭಾರತ, ಚೀನ ಅನೌಪಚಾರಿಕ ಶೃಂಗಸಭೆ ಯಶಸ್ವಿಯಾದ  ಬೆನ್ನಲ್ಲೆ ಮುಂದಿನ ವರ್ಷ ನಡೆದ ಚೀನಾದಲ್ಲಿ ನಡೆಯಲಿರುವ ಮೂರನೇ ಅನೌಪಚಾರಿಕ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯನ್ನು, ಕ್ಸಿ ಜಿನ್ ಪಿಂಗ್ ಅಹ್ವಾನಿಸಿದ್ದಾರೆ.

Advertisement

ಈ ಅಹ್ವಾನವನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೊಖಲೆ  ತಿಳಿಸಿದ್ದಾರೆ. 2018ರ ಎಪ್ರಿಲ್‌ನಲ್ಲಿ ಚೀನದ ವುಹಾನ್‌ನಲ್ಲಿ ನಡೆದಿದ್ದ ಎರಡೂ ದೇಶಗಳ ನಡುವಿನ ಮೊದಲ ಅನೌಪಚಾರಿಕ ಸಭೆಯು ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ಶಕ್ತಿ ತುಂಬಿತ್ತು. ಈಗ ಮಹಾಬಲಿಪುರಂ ಶೃಂಗಸಭೆಯು ಆ ಬಾಂಧವ್ಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಎರಡೂ ದೇಶಗಳು ತಮ್ಮ ನಡುವಿನ ಭಿನ್ನಮತಗಳು ವಿವಾದಗಳಾಗಿ ಮಾರ್ಪಾಡಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ನಿರ್ಧರಿಸಿವೆ. ಪರಸ್ಪರರ ಕಾಳಜಿಗೆ ಬೆಲೆ ನೀಡುವುದು, ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹಾಗೂ ಪ್ರಾಂತೀಯ ಮಟ್ಟದಲ್ಲಿ ಶಾಂತಿ, ಸೌಹಾರ್ದ ಸಾಧಿಸಿ ಅದನ್ನು ವಿಶ್ವಮಟ್ಟಕ್ಕೂ ವೃದ್ಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಇನ್ನು ಮುಂದೆ ನಡೆದುಕೊಳ್ಳಲಿವೆ’ ಮುಂದಿನ ಅನೌಪಚಾರಿಕ ಭೇಟಿಯು ಎರಡು ದೇಶಗಳ ಭಾಂದವ್ಯ ವೃದ್ಧಿಗೆ ನೆರವಾಗಲಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next