Advertisement
ನಿತಿನ್ ಗಡ್ಕರಿ, ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರು
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 72ನೇ ಜನ್ಮ ದಿನದ ಅಂಗವಾಗಿ ಸಂಕ್ಷಿಪ್ತ ವಿವರಣೆ. 2014ರಲ್ಲಿ ನರೇಂದ್ರ ಮೋದಿ ಜಿ ಅವರು ಭಾರತದ ಪ್ರಧಾನಮಂತ್ರಿಯಾಗಿ ತಮ್ಮ ಪಯಣವನ್ನು ಆರಂಭಿಸಿದ ಅನಂತರ, ಸಮಾಜದ ಎಲ್ಲ ವರ್ಗಗಳಿಗೂ ಮೂಲ ಸೌಕರ್ಯ ಒದಗಿಸಿರುವ ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸುವ ನಿಟ್ಟಿನಲ್ಲಿ ಅಭಿವೃದ್ಧಿಯ ವೇಗ ಮತ್ತು ವ್ಯಾಪ್ತಿಯು ಉದಯಿಸುತ್ತಿರುವ ನವ ಭಾರತದ ವಿಶೇಷ ಹೆಜ್ಜೆ ಗುರುತಾಗಿದೆ.
ದೇಶದಲ್ಲಿನ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದ ಸಾಂಕ್ರಾಮಿಕದ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನ ಪರೀಕ್ಷಾ ಸಮಯವನ್ನು ಎದುರಿಸಿದ ಅನಂತರ ಭಾರತವು ಹೇಗೆ ತ್ವರಿತ ಪ್ರಗತಿಯನ್ನು ಸಾಧಿಸಲು ನಿರ್ಧರಿಸಿದೆ ಎಂಬುದನ್ನೂ ಇದು ತೋರಿಸುತ್ತದೆ.
Related Articles
Advertisement
ಕಳೆದ ಕೆಲವು ವರ್ಷಗಳಲ್ಲಿ, ಸಮಗ್ರ ದೃಷ್ಟಿಕೋನದ ಮೂಲಕ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನವನ್ನು ಸರಕಾರ ಖಾತ್ರಿಪಡಿಸಿದೆ. ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಬಾಧ್ಯಸ್ಥರಿಗೆ ಸಮಗ್ರ ಯೋಜನೆಯನ್ನು ಸಾಂಸ್ಥಿಕಗೊಳಿಸುವ ಮೂಲಕ ಹಿಂದಿನ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯ ಮಾಡಿದೆ. ಯಾವುದೇ ಯೋಜನೆಯನ್ನು ಆಲಸ್ಯದಿಂದ ಪ್ರತ್ಯೇಕವಾಗಿ ಯೋಜಿಸುವ ಮತ್ತು ವಿನ್ಯಾಸಗೊಳಿಸುವ ಬದಲು, ಈ ರಾಷ್ಟ್ರೀಯ ಮಾಸ್ಟರ್ ಯೋಜನೆಯಡಿಯಲ್ಲಿ ಒಂದೇ ವೇದಿಕೆಯಲ್ಲಿ ಯೋಜನೆಗಳನ್ನು ಸಾಮಾನ್ಯ ದೂರದೃಷ್ಟಿಯಲ್ಲಿ ವಿನ್ಯಾಸಗೊಳಿಸಿ ಮತ್ತು ಕಾರ್ಯಗತಗೊಳಿಸಲಾಗುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದೇಶಾದ್ಯಂತ ಅತ್ಯಾಧುನಿಕ ಬಹು-ಮಾದರಿ ಮೂಲಸೌಕರ್ಯವನ್ನು ನಿರ್ಮಾಣದ ವೇಗವನ್ನುನೀಡಲಾರಂಭಿಸಿದೆ, ಇದು ಈ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.
ಸಚಿವ ಸಂಪುಟದ ಮುಂದೆ ನನ್ನ ನಾನಾ ಪ್ರಸ್ತುತಿಗಳಿಗೆ ಗೌರವಾನ್ವಿತ ಪ್ರಧಾನಮಂತ್ರಿ ಸದಾ ಮೌಲ್ಯ ಸೇರ್ಪಡೆ ಮಾಡುತ್ತಾರೆ ಮತ್ತು ನವೀನ ಆಲೋಚನೆಗಳನ್ನು ನೀಡುತ್ತಾರೆ. ಅವರು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕೆಲವು ಪ್ರತಿಷ್ಠಿತ ಯೋಜನೆಗಳ ಪ್ರಗತಿಯನ್ನು ಖುದ್ದು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಎಲ್ಲ ಬಾಧ್ಯಸ್ಥಗಾರರನ್ನು ವಿಶೇಷವಾಗಿ ಉದ್ಯೋಗಿಗಳನ್ನು ತಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಪ್ರೋತ್ಸಾಹಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಡಿಗಲ್ಲು ಹಾಕಿದ ಅಂತಹ ಒಂದು ಘಟನೆಯು ನನ್ನ ತವರು ರಾಜ್ಯ ಮಹಾರಾಷ್ಟ್ರದ ದೇಗುಲ ನಗರಿ ಪಂಢರಾಪುರಕ್ಕೆ ಸಂಪರ್ಕ ಸುಧಾರಿಸುವ ಗುರಿ ಹೊಂದಿರುವ ಎರಡು ರಸ್ತೆ ಯೋಜನೆಯಾಗಿದೆ. ಅವರು ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಮಾರ್ಗದ ಐದು ವಿಭಾಗಗಳು ಮತ್ತು ಶ್ರೀ ಸಂತ ತುಕಾರಾಂ ಮಹಾರಾಜ್ ಮಾರ್ಗದ ಮೂರು ವಿಭಾಗಗಳ ಚತುಷ್ಪಥಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ರಧಾನಿ ಅವರು ನಮ್ಮ ವಾರಕರಿ ಸಹೋದರರಿಂದ ಮೂರು ವಿಷಯಗಳಲ್ಲಿ ಆಶೀರ್ವಾದ ಕೋರಿದರು, ಅವುಗಳೆಂದರೆ ಹೆದ್ದಾರಿಗಳ ಉದ್ದಕ್ಕೂ ಮರಗಳನ್ನು ನೆಡುವುದು, ರಸ್ತೆಗಳ ಉದ್ದಕ್ಕೂ ನಿರ್ದಿಷ್ಟ ದೂರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಮತ್ತು ಪಂಢರಾಪುರವನ್ನು ಭಾರತದ ಸ್ವತ್ಛ ಯಾತ್ರಾ ಸ್ಥಳವನ್ನಾಗಿ ಮಾಡಲು ಕೋರಿದರು. ನೋಡಿ, ಅವರು ಸಂಪರ್ಕವನ್ನು ಹೇಗೆ ನಿರ್ಮಿಸುತ್ತಾರೆ. ಪ್ರಧಾನಿ ಅವರ ಅಭಿವೃದ್ಧಿಯ ಕಲ್ಪನೆಯು ಎರಡು ಪ್ರಮುಖ ಅಂಶಗಳನ್ನು ಹೊಂದಿದೆ – ಆಧುನಿಕತೆ ಜತೆಗೆ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯ ಪುನರುಜ್ಜೀವನ.
ಸಾಗರಮಾಲಾ, ನಿರ್ದಿಷ್ಟ ಸರಕು ಸಾಗಣೆ ಕಾರಿಡಾರ್‌ಗಳು, ರಾಷ್ಟ್ರೀಯ ಸಾಗಣೆ ನೀತಿ ಮತ್ತು ಕೈಗಾರಿಕೆ ಕಾರಿಡಾರ್‌ಗಳು, ಉಡಾನ್-ಆರ್‌ಸಿಎಸ್, ಭಾರತ್ ನೆಟ್, ಡಿಜಿಟಲ್ ಇಂಡಿಯಾ, ಪರ್ವತಮಾಲಾ ಮತ್ತು ಮೇಕ್ ಇನ್ ಇಂಡಿಯಾದಂತಹ ಪ್ರಧಾನಮಂತ್ರಿಯವರ ಇತರ ಪ್ರಮುಖ ಉಪಕ್ರಮಗಳು ನಮ್ಮ ಭಾರತಮಾಲಾ ಪರಿಯೋಜನಾ ಕಾರ್ಯಕ್ರಮವನ್ನು ಇನ್ನಷ್ಟು ಸಕ್ರಿಯಗೊಳಿಸಿ ಅದರ ದೊಡ್ಡ ಫಲಾನುಭವಿಯಾಗಿದೆ.ಭಾರತಮಾಲಾ ಪರಿಯೋಜನವು ದೇಶಾದ್ಯಂತ ಹೊಸ ಹೆದ್ದಾರಿ ಯೋಜನೆಗಳ ನಿರ್ಮಾಣಕ್ಕಾಗಿ ಕೇಂದ್ರದ ನೆರವಿನ ಪ್ರಮುಖ ಕಾರ್ಯಕ್ರಮವಾಗಿದೆ. ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶ ಸೇರಿ ದೂರದ ಗಡಿ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ವಿಶೇಷ ಒತ್ತು ನೀಡಲಾಗಿದೆ. ಭಾರತಮಾಲಾ ಪರಿಯೋಜನದ ಭಾಗವಾಗಿ ಎನ್‌ಎಚ್‌ಎಐ ಮತ್ತು ಎನ್‌ಎಚ್‌ಐಡಿಸಿ ನಾನಾ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇಗಳು ಮತ್ತು 35 ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್‌ಗಳನ್ನು (ಎಂಎಂಎಲ್ ಪಿಎಸ್) ವೇಗವಾಗಿ ಪೂರ್ಣಗೊಳಿಸುತ್ತಿದೆ. ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್ ವೇ, ಅಹ್ಮದಾಬಾದ್-ಧೋಲೇರಾ ಎಕ್ಸ್‌ಪ್ರೆಸ್ ವೇ, ದಿಲ್ಲಿ- ಅಮೃತಸರ-ಕತ್ರಾ ಎಕ್ಸ್‌ಪ್ರೆಸ್ ವೇ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ, ಅಮೃತಸರ-ಭಟಿಂಡಾ-ಜಾಮ್ನಗರ ಎಕ್ಸ್‌ಪ್ರೆಸ್ ವೇ, ರಾಯಪುರ -ವಿಜಿಝಡ್ ಎಕ್ಸ್‌ಪ್ರೆಸ್ ವೇ, ಹೈದರಾಬಾದ್-ವಿಜಿಝಡ್ ಎಕ್ಸ್‌ಪ್ರೆಸ್ ವೇ, ಎರಡನೇ ನಗರ ವಿಸ್ತರಣೆ, ಚೆನ್ನೈ-ಸೇಲಂ ಎಕ್ಸ್‌ಪ್ರೆಸ್ ವೇ ಮತ್ತು ಚಿತ್ತೋರ್-ತ್ರಿಚ್ಚಾರ್ ಎಕ್ಸ್‌ಪ್ರೆಸ್ ವೇ ಸೇರಿ ಕೆಲವು ಪ್ರಮುಖ ಎಕ್ಸ್‌ಪ್ರೆಸ್ ವೇಗಳು ಮತ್ತು ಕಾರಿಡಾರ್‌ಗಳು ಸಂಪೂರ್ಣವಾಗುವ ಹಂತದಲ್ಲಿವೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ ಕೆಲವು ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ, ಶ್ರೀನಗರ ಮತ್ತು ಲೇಹ್‌ಗೆ ಸಂಪರ್ಕ ಕಲ್ಪಿಸುವ ಪ್ರತಿಷ್ಠಿತ ಝೊಜಿಲಾ ಸುರಂಗ ಮತ್ತು ಝಡ್-ಮಾರ್ತ್ ಸೇರಿವೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಅವರ ಸಮರ್ಥ ಮತ್ತು ಸಕ್ರಿಯ ನಾಯಕತ್ವ ಮತ್ತು ದೂರದೃಷ್ಟಿಯಿಲ್ಲದೆ ನನ್ನ ಸಚಿವಾಲ ಯದಡಿಯಲ್ಲಿ ರಸ್ತೆ ಮತ್ತು ಹೆದ್ದಾ ರಿಗಳ ಮೂಲಸೌಕರ್ಯಗಳ ಎಲ್ಲ ಅಭೂತಪೂರ್ವ ಪ್ರಗತಿ ಮತ್ತು ಅಭಿವೃದ್ಧಿಯು ಸಾಧ್ಯವಾಗುತ್ತಿರಲಿಲ್ಲ, ಅವರು ದಿನದ 24 ಗಂಟೆಗಳೂ ಶ್ರಮಿಸುತ್ತಿದ್ದಾರೆ ಮತ್ತು ಅವರ ಪ್ರಯತ್ನಗಳು ಮತ್ತು ದೂರದೃಷ್ಟಿ ನವಭಾರತದ ಸಾಕಾರಕ್ಕೆ ನಮಗೆ ನಿರಂತರ ಮಾರ್ಗದರ್ಶನವಾಗಿದೆ.
ನಮ್ಮ ಪ್ರೀತಿಯ ಮತ್ತು ಅತ್ಯಂತ ಪ್ರಧಾನಮಂತ್ರಿ ಇದೇ ಶನಿವಾರ 72ನೇ ವರ್ಷಕ್ಕೆ ಕಾಲಿಡುತ್ತಿರುವಾಗ ಅವರ ಜನ್ಮದಿನದಂದು ಅವರ ಗೌರವಾರ್ಥ ನನ್ನ ಸಚಿವಾಲಯದ ಎಲ್ಲ ಅಭಿವೃದ್ಧಿ ಮತ್ತು ಪ್ರಗತಿ ಸಮರ್ಪಿಸುವ ಮೂಲಕ ನಾವೆಲ್ಲರೂ ಈ ದಿನವನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧರಿದ್ದೇವೆ.