Advertisement

ಪಿಎಂ ಪತ್ನಿಗೆ ಗಾಯ

08:15 AM Feb 08, 2018 | Team Udayavani |

ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್‌ ರಾಜಸ್ಥಾನದ ಚಿತ್ತೋರ್‌ಘಡದಲ್ಲಿ ನಡೆದ ಅಪಘಾತವೊಂದರಲ್ಲಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಅವರ ಸಂಬಂಧಿಕರೊಬ್ಬರು ಕೊನೆಯುಸಿ ರೆಳೆದಿದ್ದಾರೆ. ಕೋಟಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಶೋದಾ ಬೆನ್‌ ಮತ್ತು ಅವರ ಸಂಬಂಧಿಕ ಬಸಂತ್‌ ಭಾಯ್‌ ಮೋದಿ (67)ಹಾಗೂ ಇತರ ಇಬ್ಬರು ಕಾರ್‌ನಲ್ಲಿ ಚಿತ್ತೋರ್‌ಗಡಕ್ಕೆ ವಾಪ‌ಸಾಗುತ್ತಿದ್ದರು. ಪರಸೋಲಿ ಠಾಣಾ ವ್ಯಾಪ್ತಿಯಲ್ಲಿ ಕಾರು ಸಾಗುತ್ತಿದ್ದಾಗ ಟ್ರಕ್‌ ಒಂದಕ್ಕೆ ಡಿಕ್ಕಿ ಹೊಡೆಯಿತು. ಈ ಸಂದರ್ಭದಲ್ಲಿ ಬಸಂತ್‌ ಭಾಯ್‌ ಮೋದಿ ಅಸುನೀಗಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next