Advertisement

ನಾನು ಕರ್ನಾಟಕದ ಬಿಜೆಪಿ ಕಾರ್ಯಕರ್ತ:ಮೋದಿ ಆ್ಯಪ್‌ ಕೀ ಬಾತ್‌

10:13 AM Apr 26, 2018 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು  ಕರ್ನಾಟಕವಿಧಾನಸಭೆ ಚುನಾವಣೆಗೆ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ.   ಗುರುವಾರ ಬೆಳಗ್ಗೆ 9 ಗಂಟೆಯಿಂದ ಪಕ್ಷದ ಅಭ್ಯರ್ಥಿಗಳು, ಪದಾಧಿಕಾರಿಗಳು, ಸಂಸದರು, ಶಾಸಕರೊಂದಿಗೆ ಮೋದಿ ಆ್ಯಪ್‌ನಲ್ಲಿ ಸಂವಾದ ನಡೆಸುತ್ತಿದ್ದಾರೆ. 

Advertisement

ಪ್ರಧಾನಿಯವರು ವಿಡಿಯೋ ಕಾನ್ಫ‌ರೆನ್ಸ್‌ ಮೂಲಕ ಸಂವಾದ ದ ಮೂಲಕ ಅಭ್ಯರ್ಥಿಗಳಿಗೆ  ಸಲಹೆ, ಸೂಚನೆ ನೀಡುತ್ತಿದ್ದಾರೆ. 

ನಾನು  ಒಬ್ಬ ಕನ್ನಡಿಗ. ನಾನು ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಂದು ಕನ್ನಡದಲ್ಲೇ ಮಾತುಗಳನ್ನಾರಂಭಿಸಿದ ಮೋದಿ  ಈ ಬಾರಿ ಕರ್ನಾಟಕದಲ್ಲಿ ಕಮಲ ಅರಳಲಿದೆ ಎಂದರು. ಯುಪಿಎ ಸರ್ಕಾರದ ವೈಫ‌ಲ್ಯಗಳನ್ನು ಹೇಳಿದರು. ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಗಳನ್ನು ಕೇಳಬೇಕು ಎಂದರು.  ಇನ್ನು 15 ದಿನ ವಿರಮಿಸಿದೆ ಕಾರ್ಯಕರ್ತರು ಹೋರಾಟ ಮಾಡಬೇಕಿದೆ.ಗೆಲುವು ನಮ್ಮದಾಗಲಿದೆ ಎಂದರು. 

ಅಭಿವೃದ್ಧಿ ರಾಜಕರಾಣ ಬಿಜೆಪಿಯ ಮೂಲ ಮಂತ್ರ. ಚುನಾವಣೆಯನ್ನು ಕಾರ್ಯಕರ್ತರು ಆತ್ಮಸ್ಥೈರ್ಯದಿಂದ ಎದುರಿಸಬೇಕಾಗಿದೆ.ಕರ್ನಾಟಕಕ್ಕೆ ಬಂದು ನಾನು ಮತಯಾಚಿಸಲಿದ್ದೇನೆ ಎಂದರು. 

ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರು ಮೊದಲ ಪ್ರಶ್ನೆ ಕೇಳಿದರು. ‘ಹರಿ  ಓಂ ಮೋದಿ ಜಿ .. ಚುನಾವಣೆಗೆ15 ದಿನ ಇದೆ. ನಮ್ಮಲ್ಲಿ ಬೂತ್‌ ಕೆಲಸಗಳು ತುಂಬಾ ಚೆನ್ನಾಗಿ ನಡೆಯುತ್ತಿದೆ. ಚುನಾವಣೆಗೆ ನಾವು ಏನು ಕೆಲಸ ಮಾಡಬೇಕು ಎನ್ನುವ ಸಲಹೆ ನೀಡಿ’ ಎಂದರು. 

Advertisement

ಉತ್ತರ ನೀಡಿದ ಪಿಎಂ ಮೋದಿ ‘ಕಾರ್ಯಕರ್ತರ ಶಕ್ತಿ ಶಕ್ತಿ ದುಪ್ಪಟ್ಟು ಮಾಡಿ .ಎಷ್ಟು ಪುರುಷ ಕಾರ್ಯಕರ್ತರಿದ್ದಾರೆ ಅಷ್ಟೇ ಮಹಿಳಾ ಕಾರ್ಯಕರ್ತರು ಬೇಕು .10 ಯುವಕರಿದ್ದರೆ 10 ಮಂದಿ ಮಹಿಳೆಯರು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಕಾರ್ಯಕರ್ತರಿಗೆ ಮನೆಗಳನ್ನು ಹಂಚಿ ಕೊಡಿ .15 ದಿನಮತದಾರರ ಸಂಪರ್ಕ ಮಾಡಿ .ಮತದಾನ ಕೇಂದ್ರದ ವರೆಗೆಮತದಾರರನ್ನು ಕರೆದೊಯ್ಯಿರಿ . ಗೆಲುವು ನಿಮ್ಮದಾಗುತ್ತದೆ. ಶಾಸಕ ಸ್ಥಾನದ ಗೆಲುವಲ್ಲ, ಪ್ರತೀ ಬೂತ್‌ನ ಗೆಲುವು ನಮ್ಮದಾಗಬೇಕು’  ಎಂದರು. 

ನಿಪ್ಪಾಣಿ ಶಾಸಕಿ  ಶಶಿಕಲಾ ಜೊಲ್ಲೆ ಅವರು ‘ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರಗಳನ್ನು ಹೇಳಿಕೊಂಡು ಕೇಂದ್ರ ಸರ್ಕಾರ ರೈತರ ಏಳಿಗೆಗಾಗಿ  ಏನೆಲ್ಲಾ ಯೋಜನೆಗಳನ್ನು ತಂದಿದೆ’ಎಂದು ಪ್ರಶ್ನಿಸಿದರು. 

ಉತ್ತರ ನೀಡಿದ ಪಿಎಂ ಮೋದಿ ‘ಭಾರತ ರೈತ ಪ್ರಧಾನ ದೇಶ ಆಗಬೇಕು. ರೈತರ ಆತ್ಮಹತ್ಯೆ ನಿಲ್ಲಬೇಕು. ಕಡಿಮೆ ಕರ್ಚಿನಲ್ಲಿ ಹೆಚ್ಚು ಬೆಳೆ ಬೆಳೆಯಬೇಕು. ಪ್ರಧಾನಮಂತ್ರಿ ಫ‌ಸಲ್‌ ಭೀಮಾ ಯೋಜನೆಯನ್ನು ತಂದಿದ್ದೇವೆ. ಹಲವು  ರೈತರಿಗೆ ಲಾಭವಾಗಿದೆ. ಹಲವು ಯೋಜನೆಗಳು  ರೈತರಿಗೆ ತಲುಪುತ್ತಿಲ್ಲ. ಅವುಗಳನ್ನು ರೈತರಿಗೆ ಮನವರಿಕೆ ಮಾಡಿ, ಲಾಭ ಪಡೆಯುವಂತೆ ಮಾಡುವುದು ನಮ್ಮ ಕರ್ತವ್ಯ’ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next