Advertisement

PM Modi ಅಮೆರಿಕ ಪ್ರವಾಸ : ಭಾರತೀಯ ಸಮುದಾಯಕ್ಕೆ ನಿರಾಶೆ

12:29 AM Jun 19, 2023 | Team Udayavani |

ನ್ಯೂಯಾರ್ಕ್‌: ಪ್ರಧಾನಿ ನರೇಂದ್ರ ಮೋದಿ ಜೂ.20ರಿಂದ 24ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೆ ಅವರ ಬಿಡುವಿಲ್ಲದ ವೇಳಾಪಟ್ಟಿಯು ಅಮೆರಿಕದ ಭಾರತೀಯ ಸಮುದಾಯವನ್ನು ನಿರಾಶೆಗೊಳಿಸಿದೆ.

Advertisement

ಅಮೆರಿಕ ಭೇಟಿ ವೇಳೆ ಪ್ರಧಾನಿ ಮೋದಿ ಅವರು ವಾಷಿಂಗ್ಟನ್‌ ಡಿಸಿಯಲ್ಲಿ ಭಾರ ತೀಯ ಸಮುದಾಯದ ಚಿಕ್ಕ ಗುಂಪನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾ ನಿತ 1,000 ಮಂದಿ ಪಾಲ್ಗೊಳ್ಳಲು ಮಾತ್ರ ಅವಕಾಶವಿದೆ.

ಶಿಕಾಗೋದಲ್ಲಿ ದೊಡ್ಡ ಸಂಖ್ಯೆಯ ಭಾರತೀಯ -ಅಮೆರಿ ಕನ್ನರನ್ನು ಸೇರಿಸಿ, ದೊಡ್ಡ ಸಮಾರಂಭ ಏರ್ಪಡಿಸಲು ಭಾರತೀಯ ಸಮುದಾಯ ಯೋಜನೆ ಹಮ್ಮಿಕೊಂಡಿತ್ತು. ಆದರೆ ಮೋದಿ ಅವರ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಈ ಸಮಾರಂಭ ಸಾಧ್ಯವಾಗುತ್ತಿಲ್ಲ. ಇದು ಭಾರತೀಯ ಸಮುದಾಯವರನ್ನು ನಿರಾಶೆಗೆ ತಳ್ಳಿದೆ.

Advertisement

Udayavani is now on Telegram. Click here to join our channel and stay updated with the latest news.

Next