Advertisement

ಇಂಧನ ಭದ್ರತೆಗೆ ಪ್ರಾಶಸ್ತ್ಯ; ಪ್ರವಾಸದ ಬಗ್ಗೆ ಪ್ರಧಾನಿ ಮಾಹಿತಿ

06:09 PM Feb 08, 2018 | Team Udayavani |

ದುಬೈ: ಇಂಧನ ಭದ್ರತೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ವಿಚಾರಗಳು ಇದೇ ವಾರಾಂತ್ಯಕ್ಕೆ ಕೈಗೊಳ್ಳಲಿರುವ ಮೂರು ರಾಷ್ಟ್ರಗಳ ಪ್ರವಾಸದ ವೇಳೆ ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಫೆ. 9ರಿಂದ ಆರಂಭವಾಗಲಿರುವ ಅವರ ಪ್ರವಾಸದಲ್ಲಿ ಯುಎಇ, ಪ್ಯಾಲೆಸ್ತೀನ್‌ ಹಾಗೂ ಒಮನ್‌ ರಾಷ್ಟ್ರಗಳಿಗೆ ತೆರಳಲಿದ್ದಾರೆ.

Advertisement

ಈ ಕುರಿತಂತೆ, “ಗಲ್ಫ್ ನ್ಯೂಸ್‌ ಎಕ್ಸ್‌ಪ್ರೆಸ್‌’ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ, ಮೂರು ರಾಷ್ಟ್ರಗಳ ಪ್ರವಾಸದ ವೇಳೆ, ಸರ್ಕಾರ-ಸರ್ಕಾರ ಹಾಗೂ ಉದ್ದಿಮೆ-ಉದ್ದಿಮೆ ನಡುವಿನ ಸಹಕಾರಕ್ಕೆ ಒತ್ತು ನೀಡಲಾಗುವುದು ಎಂದರು.

ಜನರ ಜೀವನವನ್ನು ಸುಲಭಗೊಳಿಸುವ ತಂತ್ರಜ್ಞಾನಗಳ ಬೆಳವಣಿಗೆಗೆ ತಾವು ಮಹತ್ವ ನೀಡುವುದಾಗಿ ಅವರು ಇದೇ ವೇಳೆ ತಿಳಿಸಿದರು. 2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ತರುವಾಯ ಭಾರತದಲ್ಲಿ ಆ ದೇಶದ ಹೂಡಿಕೆ 1 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಇದರ ಬೆನ್ನಲ್ಲೇ, ಕಳೆದ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯಅತಿಥಿಯಾಗಿ ಯುಎಇ ಉಪರಾಷ್ಟ್ರಪತಿ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್ಟೌಮ್ ಆಗಮಿಸಿದ್ದು ದ್ವಿಪಕ್ಷೀಯ ಸಂಬಂಧಗಳ ಹೆಚ್ಚಿನ ವೃದ್ಧಿಗೆ ಮತ್ತಷ್ಟು ಒತ್ತು ನೀಡಿತು.

ಇದೇ ವೇಳೆ, ಯುಎಇನಲ್ಲಿರುವ 30 ಲಕ್ಷ ಭಾರತೀಯರಲ್ಲಿ ತಮ್ಮ ಈ ಭೇಟಿ ಆತ್ಮವಿಶ್ವಾಸವನ್ನು ತರಲಿದೆಯೆಂಬ
ಆಶಾವಾದವನ್ನೂ ಮೋದಿ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next