Advertisement

ನಿಮ್ಮ ಸರ್ಟಿಫೀಕೇಟ್ ನಿಂದ ಸತ್ಯ ಮರೆಮಾಚಲಾಗುವುದಿಲ್ಲ : ಪ್ರಧಾನಿಗೆ ಪ್ರಿಯಾಂಕ ಟ್ವೀಟ್ಬಾಣ

04:47 PM Jul 16, 2021 | Team Udayavani |

ನವ ದೆಹಲಿ : ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಮತ್ತೆ ಯೋಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೋರಿಸಿರುವ ನಿರ್ಲಕ್ಷ್ಯ ಹಾಗೂ ಅಸಮರ್ಪಕ ನಿರ್ವಹಣೆಯ ನಿಜ ಮುಖವನ್ನು ಪ್ರಧಾನಿ ಅವರ ‘ಸರ್ಟಿಫಿಕೇಟ್’ ನಿಂದ ಮರೆಮಾಚಲು ಸಾಧ್ಯವಿಲ್ಲಿ ಎಂದು ಪ್ರಿಯಾಂಕ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಟಿ20 ವಿಶ್ವಕಪ್ 2021: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ ಮತ್ತು ಪಾಕಿಸ್ಥಾನ ತಂಡಗಳು

ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ತರಾಟೆಗೆ ತೆಗೆದುಕೊಂಡ ಅವರು, ವಾರಾಣಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆದಿತ್ಯನಾಥ್ ಅವರ ಕೋವಿಟ್ ಬಿಕ್ಕಟ್ಟಿನ ನಿರ್ವಹಣೆಯ ಬಗ್ಗೆ ಶ್ಲಾಘಿಸಿದ್ದರು.  ಆದರೇ, ಮುಖ್ಯಮಂತ್ರಿ ಯೋಗಿ ಅವರ ಅಸಮರ್ಪಕೆ ನಿರ್ವಹಣೆಯನ್ನು ಅವರ ಸರ್ಟಿಫಿಕೇಟ್ ನ ಹಿಂದೆ ಮರೆ ಮಾಚಲು ಖಂಡಿತ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.


ಹೆಜ್ಜೆ ಹೆಜ್ಜೆಗೂ ದೊಡ್ಡ ಪ್ರಮಾಣದಲ್ಲಿ ಜನರು ಕೋವಿಡ್ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದ್ದನ್ನು ಪ್ರಧಾನಿ ಹಾಗೂ ಯೋಗಿ ಮರೆತಿರಬಹುದು. ಆದರೇ, ಕೋವಿಡ್ ನಿಂದ ತಮ್ಮ ಬದುಕನ್ನೇ ಕಳೆದುಕೊಂಡಿರುವ ಜನ ಈ ಸಮಸ್ಯೆಯನ್ನು ಮರೆಯಲು ಸಾಧ್ಯವಿಲ್ಲ.

Advertisement

ಇತ್ತೀಚೆಗೆ ವಾರಾಣಿಸಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಕೋವಿಡ್ ನಿರ್ವಹಣೆಯನ್ನು ಮೆಚ್ಚುಗೆ ಪಟ್ಟಿದ್ದರು.  ಗರಿಷ್ಠ ಮಟ್ಟದಲ್ಲಿ ಲಸಿಕೆ ಅಭಿಯಾನ ಹಾಗೂ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ರಾಜ್ಯ ಸರ್ಕಾರದ ಉತ್ತಮ ನಿರ್ವಹಣೆಯಿಂದಾಗಿ ಸಹಜತೆಗೆ ಮರಳುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ : ಮಂಗಳೂರು: ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ತಡೆಗೋಡೆ ಕುಸಿದು ರೈಲು ಸಂಚಾರ ರದ್ದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next