Advertisement
ಶನಿವಾರ ಪಶ್ಚಿಮ ಮೇಘಾಲಯದ ತುರಾ ಮತ್ತು ಶಿಲ್ಲಾಂಗ್ ಅನ್ನು ಸಂಪರ್ಕಿಸುವ 271 ಕಿ.ಮೀ. ಉದ್ದದ ದ್ವಿಪಥದ ರಾಷ್ಟ್ರೀಯ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಪ್ರಧಾನಿ, ಮುಂದಿನ 2-3 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು 90 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ನೀಡಲಾಗುವುದು ಎಂದಿದ್ದಾರೆ. ಜತೆಗೆ, 32 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈಶಾನ್ಯಾದ್ಯಂತ 4 ಸಾವಿರ ಕಿ.ಮೀ.ನ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುವುದು ಎಂದೂ ಹೇಳಿದ್ದಾರೆ. ನಮ್ಮ ಸರಕಾರದ “ಆ್ಯಕ್ಟ್ ಈಸ್ಟ್ ಪಾಲಿಸಿ’ಯು ಶೀಘ್ರದಲ್ಲೇ ಮಿಜೋರಾಂ ಅನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳ ಬಾಗಿಲಾಗಿ ಪರಿವರ್ತಿಸಲಿದೆ ಎಂದೂ ತಿಳಿಸಿದ್ದಾರೆ.ಕಾಂಗ್ರೆಸ್ ವಿರುದ್ಧ ವಾಗ್ಧಾಳಿ: ಶನಿವಾರ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ, ಹಲವು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ಹರಿಹಾಯಲು ಮರೆಯಲಿಲ್ಲ. ಮೇಘಾಲಯದಲ್ಲಿ ಕಾಂಗ್ರೆಸ್‌ನಿಂದ ಹಗರಣಗಳ ದಾಖಲೆಯೇ ನಡೆದಿದೆ. ಮಕ್ಕಳಿಗೆ ಕೊಡುವ ಊಟದಲ್ಲೂ ಹಗರಣ ನಡೆದಿರುವುದು ವಿಷಾದನೀಯ ಎಂದಿದ್ದಾರೆ.