Advertisement

ಮೋದಿ ಅಣ್ಣನ ಮಗಳ ಹಣ ದೋಚಿದ ಕಳ್ಳರು

10:45 AM Oct 14, 2019 | sudhir |

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವುದು ಸುದ್ದಿಯಾಗುತ್ತಿವೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಣ್ಣನ ಮಗಳ ಪರ್ಸ್‌ ಅನ್ನೂ ಕಳ್ಳರು ಕದ್ದೊಯ್ದಿದ್ದಾರೆ. ದಮಯಂತಿ ಬೆನ್‌ ಮೋದಿ ಇಲ್ಲಿಯ ಸಿವಿಲ್‌ ಲೈನ್ಸ್‌ ಪ್ರದೇಶದ ಗುಜರಾತಿ ಸಮಾಜ ಭವನದ ಒಳಗೆ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಪರ್ಸ್‌ ಕದ್ದು ಪರಾರಿಯಾಗಿದ್ದಾರೆ. ಪರ್ಸ್‌ನಲ್ಲಿ 56,000 ನಗದು ಮತ್ತು 2 ಮೊಬೈಲ್‌ ಫೋನ್‌ಗಳಿದ್ದವು ಎಂದು ಬೆನ್‌ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next