Advertisement
ದೀಪಾವಳಿಯ ಹಿನ್ನೆಲೆಯಲ್ಲಿ ಈ ಸಂದೇಶ ನೀಡಿರುವ ಅವರು, ಈ ದೀಪಾವಳಿಯಂದು ನಾವೆಲ್ಲರೂ ನಮ್ಮ ದೇಶವನ್ನು ದಿಟ್ಟವಾಗಿ ರಕ್ಷಿಸುತ್ತಿರುವ ಯೋಧರ ಗೌರವಾರ್ಥ ಒಂದು ದೀಪವನ್ನು ಬೆಳಗೋಣ ಎಂದು ಹೇಳಿದ್ದಾರೆ. “ನಮ್ಮ ಯೋಧರ ಬಗ್ಗೆ ನಮಗಿರುವ ಕೃತಜ್ಞತಾಭಾವವನ್ನು ತೋರ್ಪಡಿಸಲು ಪದಗಳು ಸಾಲುತ್ತಿಲ್ಲ. ಗಡಿ ಕಾಯುತ್ತಿರುವ ಯೋಧರ ಕುಟುಂಬಗಳಿಗೂ ನಮನಗಳು’ ಎಂದೂ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಬೆಳಕಿನ ಹಬ್ಬದ ದಿನ ಯೋಧರಿಗಾಗಿ ದೀಪವೊಂದನ್ನು ಹಚ್ಚುವಂತೆ ಇತ್ತೀಚೆಗೆ ಮನ್ ಕಿ ಬಾತ್‌ನಲ್ಲಿ ತಾವು ಕರೆ ನೀಡಿದ್ದ ಆಡಿಯೋ ಕ್ಲಿಪ್ ಅನ್ನೂ ಮೋದಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಪ್ರಧಾನಿ ಮೋದಿ ಸಲಹೆ ನೀಡಿದ ಬೆನ್ನಲ್ಲೇ ಈ ವಿಶೇಷ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ದೇಶವಾಸಿಗಳಿಗೆ ಬಿಜೆಪಿ ಕರೆ ನೀಡಿದೆ. “ಯೋಧರಿಗಾಗಿ ಹಚ್ಚಿದ ದೀಪ’ದೊಂದಿಗೆ ನೀವು ನಿಂತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ Salute2Soldiers ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳುವಂತೆ ಕೋರಿದೆ.