ಭಾನುವಾರ ತಮ್ಮ ಈ ವರ್ಷದ ಕೊನೆಯ “ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕಿವಿಮಾತಿದು.
Advertisement
ಬಹಳಷ್ಟು ಮಂದಿ ಈಗ ರಜೆಯಲ್ಲಿದ್ದೀರಿ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆಂದು ಪ್ರವಾಸ, ದೂರ ಪ್ರಯಾಣಕ್ಕೂ ಪ್ಲ್ರಾನ್ ಮಾಡಿಕೊಂಡಿರುತ್ತೀರಿ. ಆದರೆ, ನಿಮ್ಮ ಈ ರಜೆಯ ಮಜಾದ ಮೇಲೆ ವೈರಸ್ ಪ್ರತಿಕೂಲ ಪರಿಣಾಮ ಬೀರಬಾರದು ಎಂದಾದರೆ ಮಾಸ್ಕ್ಧಾರಣೆ, ಕೈಗಳನ್ನು ಸ್ವತ್ಛಗೊಳಿಸುವಿಕೆ ಮುಂತಾದ ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸಬೇಕು ಎಂದೂ ಮೋದಿ ಸಲಹೆ ನೀಡಿದ್ದಾರೆ.
ಇದೇ ವೇಳೆ, 2022ನೇ ವರ್ಷವು ಭಾರತದ ಮಟ್ಟಿಗೆ ಬೇರೆ ಬೇರೆ ರೀತಿಯಲ್ಲಿ ಸ್ಫೂರ್ತಿದಾಯಕವಾಗಿತ್ತು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸುಮಾರು 22 ಕೋಟಿ ಡೋಸ್ ಲಸಿಕೆ ವಿತರಣೆ ಮೂಲಕ ಭಾರತವು ಜಗತ್ತಿನಲ್ಲೇ ತನ್ನದೇ ಆದ ವಿಶೇಷ ಛಾಪು ಮೂಡಿಸಿತು. ಇದಲ್ಲದೇ, ಭಾರತವು 5ನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿ ರೂಪುಗೊಳ್ಳುತ್ತಿದೆ. ಭಾರತವು ರಫ್ತಿನಲ್ಲಿ 400 ಶತಕೋಟಿ ಡಾಲರ್‌ನ ದಾಖಲೆ ಬರೆದಿದೆ. ಬಾಹ್ಯಾಕಾಶ, ರಕ್ಷಣೆ, ಡ್ರೋನ್ ವಲಯದಲ್ಲೂ ಹೊಸ ಮೈಲುಗಲ್ಲುಗಳನ್ನು ಸಾಧಿಸಿದೆ ಎಂದು ಮೋದಿ ನುಡಿದರು. ಶಿವಮೊಗ್ಗ, ಗದಗದ ಸಾಧಕರ ಪ್ರಸ್ತಾಪ
ಮನದ ಮಾತಿನಲ್ಲಿ ಮೋದಿಯವರು, ಅಡಿಕೆ ಹಾಳೆಯಿಂದ ವಿಶೇಷ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುತ್ತಿರುವ ಶಿವಮೊಗ್ಗದ ದಂಪತಿ ಸುರೇಶ್-ಮೈಥಿಲಿ ದಂಪತಿಯ ಸಾಧನೆಯನ್ನು ಕೊಂಡಾಡಿದ್ದಾರೆ. ಜತೆಗೆ, ಕಳೆದ 25 ವರ್ಷಗಳಿಂದ ಕರ್ನಾಟಕದ ಕಲೆ-ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ “ಕಲಾ ಚೇತನ’ ಎಂಬ ವೇದಿಕೆ ಸೃಷ್ಟಿಸಿರುವ ಗದಗ ಜಿಲ್ಲೆಯ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ ಅವರನ್ನೂ ಮೋದಿ ಶ್ಲಾ ಸಿದ್ದಾರೆ.