Advertisement
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಇ- ಸಿಗರೇಟ್ ನಿರುಪದ್ರವ ಎಂದು ಇಂದಿನ ಯುವಜನಾಂಗ ಭಾವಿಸಿದೆ. ತಂಬಾಕು ಉತ್ಪನ್ನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರ ವ್ಯಸನಿಯಾದರೇ ಹೊರಬರುವುದು ಬಹಳ ಕಷ್ಟ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಮುಂತಾದ ಹಲವಾರು ಕಾಯಿಲೆಗಳು ಬರುತ್ತವೆ. ತಂಬಾಕಿನಲ್ಲಿ ನಿಕೋಟಿನ್ ಅಂಶ ಹೆಚ್ಚಿರುವುದರಿಂದ ಯುವ ಜನಾಂಗದ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಜನರಲ್ಲಿ ಅರಿವಿನ ಕೊರತೆಯಿಂದ ಇ-ಸಿಗರೇಟ್ ಬಳಕೆ ಹೆಚ್ಚುತ್ತಿದೆ. ಅದನ್ನು ಕೂಡಲೇ ನಿಲ್ಲಿಸುವಂತೆ ಈ ಸಂದರ್ಭದಲ್ಲಿ ತಿಳಿಸಿದರು.
Related Articles
Advertisement
ಇದಕ್ಕೂ ಮೊದಲು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಜನ್ಮ ದಿನದ ಶುಭಾಶಯ ಹೇಳುವ ಮೂಲಕ ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಆರಂಭಿಸಿದರು. ಲತಾ ಮಂಗೇಶ್ಕರ್ ನಮಗೆ ಸ್ಪೂರ್ತಿಯಾಗಿದ್ದಾರೆ. ಅವರಿಗೆ ಹೆಚ್ಚಿನ ಗೌರವವನ್ನು ಸೂಚಿಸುತ್ತೇನೆ. ಹಾಗಾಗಿ ಅವರನ್ನು ‘ದೀದಿ’ ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಇದು ಹಬ್ಬದ ಸಮಯ. ಹೆಚ್ಚು ಹೆಚ್ಚು ಉಡುಗೊರೆಗಳು ಮನೆಬಾಗಿಲಿಗೆ ಬರುತ್ತವೆ. ನಮಗೆ ಬೇಕಾದಷ್ಟು ಇರಿಸಿಕೊಂಡು ಉಳಿದವುಗಳನ್ನು ಇತರರಿಗೆ ದಾನ ಮಾಡುವ ಮೂಲಕ ಹಬ್ಬದ ಮಹತ್ವವನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನಿಡಿದರು.