Advertisement
ನವದೆಹಲಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಪಕ್ಷದ ಸಂಸದರು ಕಾಯಾ-ವಾಚ-ಮನಸಾ ಕೆಲಸ ಮಾಡಬೇಕೆಂದರು. ದೆಹಲಿ ಹಿಂಸಾಚಾರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂಬ ಟೀಕೆಗಳ ನಡುವೆಯೇ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ. ಸಬ್ ಕಾ ಸಾಥ್; ಸಬ್ ಕಾ ವಿಕಾಸ್; ಸಬ್‌ಕಾ ವಿಶ್ವಾಸ್ ಎನ್ನುವುದೇ ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಬಗ್ಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೆಲ ದಿನಗಳ ಹಿಂದೆ ಆಡಿದ ಮಾತಿಗೆ ಪ್ರಧಾನಿ ಆಕ್ಷೇಪವೆತ್ತಿದ್ದಾರೆ. ವಂದೇಮಾತರಂ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಪ್ರಮುಖ ಪಾತ್ರ ವಹಿಸಿತ್ತು. ಅದಕ್ಕೆ ಕೂಡ ಕಟಕಿಯಾಡಿದ್ದವರು ಈಗ ಭಾರತ್ ಮಾತಾ ಕಿ ಜೈ ಹೇಳುವುದಕ್ಕೆ ಕೂಡ ತಕರಾರು ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಹೆಸರನ್ನು ಪ್ರಸ್ತಾಪಿಸದೆ ಈ ಮಾತುಗಳನ್ನಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಭಾರತ್ ಮಾತಾ ಕಿ ಜೈ ಎಂದು ಹೇಳುವುದನ್ನು ಅಪರಾಧ ಎಂದು ಬಣ್ಣಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. “ನಾವೇ ದೇಶಕ್ಕಾಗಿ ಕೆಲಸ ಮಾಡುವವರು. ಪ್ರತಿಪಕ್ಷಗಳ ಕೆಲವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ’ ಎಂದರು ಪ್ರಧಾನಿ.