ನವ ದೆಹಲಿ : ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತ ಸಂಘಗಳ ಪ್ರತಿಭಟನೆ ಮತ್ತಷ್ಟು ಕಾವು ಪಡೆಯುತ್ತಿರುವಾಗ ಎನ್ ಸಿ ಪಿ ಮುಖಂಡ ಶರದ್ ಪವಾರ್ ಮೋದಿಯ ಬಗ್ಗೆ ಮಾತಾಡಿದ್ದಾರೆ.
ಮೋದಿಯವರ ಮಧ್ಯಪ್ರವೇಶವು ಕೃಷಿ ಕಾಯ್ದೆಗಳಲ್ಲಿರುವ, ರೈತರು ಹೇಳುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಬಹುದು ಎಂದು ಅವರು ಹೇಳಿದ್ದಾರೆ.
ಓದಿ : ಕೃಷಿ ಕಾಯ್ದೆ ರದ್ದತಿಗೆ ರೈತರ ಆಗ್ರಹ
ಬಿಜೆಪಿಯ ಯಾವುದೇ ಹಿರಿಯ ಸಚಿವರು ಸಮಸ್ಯೆಯನ್ನು ಕೈಗೆತ್ತಿಕೊಂಡರೆ ರೈತರ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ನಾನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಗ್ಗೆ ಅಗೌರವ ಸೂಚಿಸುತ್ತಿದ್ದೇನೆ ಎಂಬುವುದು ಈ ಮಾತಿನ ಅರ್ಥವಲ್ಲ ಎಂದು ಪವಾರ್ ಪ್ರತಿಪಾದಿಸಿದ್ದಾರೆ.
ರೈತರ ಪ್ರತಿಭಟನೆ ಇಷ್ಟರ ಮಟ್ಟಿಗೆ ತಲುಪಿಯಾದ ಮೇಲಾದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವರು ಈ ಸಮಸ್ಯೆಯನ್ನು ಬಗೆಹರಿಸಲು ಮಧ್ಯ ಪ್ರವೇಶಿಸಲೇ ಬೇಕು ಎಂದು ಅವರು ಹೇಳಿರುವುದನ್ನು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಓದಿ : ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಯುವತಿಯರ ರಕ್ಷಣೆ, ಇಬ್ಬರ ಬಂಧನ