Advertisement

ಉಡಾವಣೆ ಆಗದ ಉಡಾನ್‌!

06:00 AM Jun 12, 2018 | |

ನವದೆಹಲಿ: ಸಣ್ಣ ಪಟ್ಟಣಗಳಿಗೆ ವಿಮಾನ ಸಂಪರ್ಕ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಉಡಾನ್‌ ನಿರೀಕ್ಷಿತ ವೇಗದಲ್ಲಿ ಪ್ರಗತಿ ಕಾಣುತ್ತಿಲ್ಲ. ಸಣ್ಣ  ಪಟ್ಟಣಗಳಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪನೆ ಮತ್ತು ಈಗಿರುವ ಏರ್‌ಪೋರ್ಟ್‌ ಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿಲ್ಲ. ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿ 10 ಕೋಟಿ ಪ್ರಯಾಣಿಕರನ್ನು ಸೇರಿಸುವ ಗುರಿ ಸಾಧನೆ ಅನುಮಾನ ಎನ್ನಲಾಗಿದೆ.

Advertisement

2017ರ ವೇಳೆಗೆ 31 ವಿಮಾನ ನಿಲ್ದಾಣಗಳ ನಿರ್ಮಾಣ ಯೋಜನೆ ಇತ್ತಾದರೂ, ಈವರೆಗೆ ಕೇವಲ 16 ನಿಲ್ದಾ ಣ ಗಳು ಕಾರ್ಯಾಚರಿಸುತ್ತಿವೆ. ಯೋಜಿತ 128 ಮಾರ್ಗಗಳ ಪೈಕಿ ಕೇವಲ 60 ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭವಾಗಿದೆ. ಯೋಜ ನೆ 3ನೇ ಹಂತ ವಿಳಂಬವಾಗಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next