Advertisement

ಮಂಗಳೂರಲ್ಲಿ ಕ್ಷಿಪ್ರ ಕಾರ್ಯಪಡೆ ನೆಲೆ

06:00 AM Oct 08, 2018 | |

ಹೊಸದಿಲ್ಲಿ: ಕರ್ನಾಟಕದ ಮಂಗಳೂರು ಸಹಿತ ದೇಶದ ಐದು ನಗರಗಳಲ್ಲಿ ಹೊಸದಾಗಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್) ನೆಲೆಗಳು ಸ್ಥಾಪನೆಯಾಗಲಿವೆ. ವಿಶೇಷವೆಂದರೆ ರಾಜ್ಯದಲ್ಲಿ ಇದು ಮೊದಲನೇ ಆರ್‌ಎಎಫ್ ನೆಲೆ. ಈಗ ಕೇಂದ್ರದಿಂದ ಅನುಮೋದನೆ ಪಡೆದ ನಗರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರದ ಹಾಜೀಪುರ ಮತ್ತು ಹರಿಯಾಣದ ನುಹ್‌ ಕೂಡ ಸೇರಿವೆ. ಕಳೆದ ಜನವರಿಯಲ್ಲೇ ಆರ್‌ಎಎಫ್ನ ಐದು ಹೊಸ ಬೆಟಾಲಿಯನ್‌ಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿತ್ತು. ಈಗ ಅಧಿಕೃತವಾಗಿ ಎಲ್ಲೆಲ್ಲಿ ಈ ನೆಲೆಗಳನ್ನು ಸ್ಥಾಪಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ ಈ ಐದನ್ನೂ ಸೇರಿಸಿದರೆ ದೇಶದಲ್ಲಿ ಒಟ್ಟು 15 ನೆಲೆಗಳು ಸ್ಥಾಪನೆಯಾದಂತಾಗುತ್ತವೆ.

Advertisement

ವಾರಾಣಸಿ ನಾಲ್ಕನೇ ನೆಲೆ
ಈಗಾಗಲೇ ಮೀರತ್‌, ಅಲಹಾಬಾದ್‌ ಮತ್ತು ಅಲೀಗಢ ಬಳಿಕ ಈಗ ಮೋದಿ ಕ್ಷೇತ್ರದಲ್ಲಿ ಈ ನೆಲೆ ಸ್ಥಾಪನೆಯಾಗುತ್ತಿದೆ.

ಏನಿದು ಆರ್‌ಎಎಫ್?
ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ ಅಥವಾ ಕ್ಷಿಪ್ರ ಕಾರ್ಯ ಪಡೆ ಎಂದು ಕರೆಸಿಕೊಳ್ಳುವ ಇದು ಕೇಂದ್ರ ಮೀಸಲು ಪೊಲೀಸ್‌ ಪಡೆಯ ಭಾಗ.

ಸದ್ಯ ದೇಶದಲ್ಲಿ ಎಲ್ಲೆಲ್ಲಿ ಆರ್‌ಎಎಫ್ ನೆಲೆಗಳಿವೆ?
ಹೈದರಾಬಾದ್‌, ಅಹ್ಮದಾ ಬಾದ್‌, ಅಲಹಾಬಾದ್‌, ಮುಂಬಯಿ, ದಿಲ್ಲಿ, ಅಲೀಗಢ, ಕೊಯಮತ್ತೂ ರು, ಜೆಮ್ಶೆಡ್‌ಪುರ, ಭೋಪಾಲ್‌, ಮೀರತ್‌.

ಆರ್‌ಎಎಫ್ ಏಕೆ ಬೇಕು?
ಕ್ಷಿಪ್ರ ಕಾರ್ಯ ಪಡೆಯ ಪ್ರಮುಖ ಕೆಲಸವೇ ಹಿಂಸಾಚಾರ ಮತ್ತು ಗುಂಪು ಘರ್ಷಣೆಗಳ ನಿಯಂತ್ರಣ ಮಾಡುವುದು. ನೀಲಿ ಬಣ್ಣದ ಡುಂಗ್ರಿ ರೀತಿಯ ಸಮವಸ್ತ್ರ ಧರಿಸುವ ಈ ಪಡೆ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಶೇಷ ರೀತಿಯ ತರಬೇತಿ ಪಡೆದಿರುತ್ತದೆ. ಇದರ ಜತೆಗೆ ಭೂಕಂಪ, ಪ್ರವಾಹ, ಚಂಡಮಾರುತ ಸಂದರ್ಭದಲ್ಲೂ ಮಾನವೀಯ ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಪಡೆ ಜತೆ ಕೆಲಸ ಮಾಡುತ್ತದೆ.

Advertisement

ಸಾವಿರ ಯೋಧರು!
ಆರ್‌ಎಎಫ್ನ ಪ್ರತಿ ನೆಲೆಯಲ್ಲೂ ಒಂದು ಸಾವಿರ ಯೋಧರು ಇರುತ್ತಾರೆ. ಇವರ ಬಳಿ ಪಂಪ್‌ ಆRಕ್ಷನ್‌ ಗನ್‌, ಹೊಗೆ ಚಿಮ್ಮಿಸುವ ಗ್ರೆನೇಡ್‌ ಸೇರಿ ಹಿಂಸಾಚಾರ ನಿಯಂತ್ರಣಕ್ಕೆ ಬೇಕಾದ ಉಪಕರಣಗಳುರುತ್ತವೆ.

ಬಜಪೆ/ಮರವೂರಿನಲ್ಲಿ ನೆಲೆ
ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ ಕಚೇರಿ ಸ್ಥಾಪನೆಗಾಗಿ ಮಂಗಳೂರಿನ ಬಜಪೆ ಮತ್ತು ಮರವೂರಿನಲ್ಲಿ ಜಾಗವನ್ನು ಗುರುತಿಸಿ ಎರಡು ವರ್ಷಗಳ ಹಿಂದೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಸಲ್ಲಿಕೆಯ ಬಳಿಕ ಪೊಲೀಸ್‌ ಕಮಿಷನರೆಟ್‌ಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆದಿರುತ್ತದೆ.
-ಟಿ.ಆರ್‌. ಸುರೇಶ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next