Advertisement

ತ್ರಿವಳಿ ತಲಾಕ್‌ ಅಪರಾಧೀಕರಣ ಮಸೂದೆ: ಮೋದಿ ಸಂಪುಟ ಅನುಮೋದನೆ

03:59 PM Dec 15, 2017 | Team Udayavani |

ಹೊಸದಿಲ್ಲಿ : ತ್ರಿವಳಿ ತಲಾಕನ್ನು ಅಪರಾಧೀಕರಿಸುವ, ತ್ರಿವಳಿ ತಲಾಕ್‌ ಮಸೂದೆ ಎಂದೆ ತಿಳಿಯಲ್ಪಟ್ಟಿರುವ “ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಇಂದು ಶುಕ್ರವಾರ ಅನುಮೋದನೆ ನೀಡಿದೆ.

Advertisement

ಇಂದು ಆರಂಭಗೊಂಡಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಕೈಗೆತ್ತಿಕೊಳ್ಳಲಾಗುವುದು. 

ತ್ರಿವಳಿ ತಲಾಕ್‌ ಎನ್ನುವುದು ಮುಸ್ಲಿಮ್‌ ಪುರುಷರು ತಮ್ಮ ಪತ್ನಿಗೆ ತತ್‌ಕ್ಷಣ ನೀಡುವ ವಿವಾಹ ವಿಚ್ಛೇದನವಾಗಿದ್ದು ಆ ಪ್ರಕಾರ ಅವರು ಮೂರು ಬಾರಿ ತಲಾಕ್‌ ಪದವನ್ನು ಉಚ್ಚರಿಸುವುದು ಕ್ರಮವಾಗಿದೆ. 

ಕಳೆದ ಆಗಸ್ಟ್‌ನಲ್ಲಿ  ನೀಡಿದ ಮಹತ್ತರ ಮೈಲುಗಲ್ಲಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ತ್ರಿವಳಿ ತಲಾಕ್‌ ಅಸಾಂವಿಧಾನಿಕ ಎಂದು ಘೋಷಿಸಿತ್ತು.

ಇದೀಗ ಮೋದಿ ಸಚಿವ ಸಂಪುಟ ಅನುಮೋದಿಸಿರುವ ತ್ರಿವಳಿ ತಲಾಕ್‌ ಮಸೂದೆಯು ಈ ಬಗೆಯ ತಲಾಕ್‌ ಪ್ರಕರಣಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಕೋರುವ ಹಕ್ಕುನ್ನು ದಯಪಾಲಿಸುತ್ತದೆ. 

Advertisement

ಮಾತ್ರವಲ್ಲದೆ ತ್ರಿವಳಿ ತಲಾಕನ್ನು ಜಾಮೀನು ರಹಿತ ಸಂಜ್ಞಾಪರಾಧವೆಂದು ಈ ಮಸೂದೆಯು ಪರಿಗಣಿಸುತ್ತದೆ ಮತ್ತು ತ್ರಿವಳಿ ತಲಾಕ್‌ ನೀಡುವ ಅಪರಾಧ ಎಸಗುವ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.

“ತ್ರಿವಳಿ ತಲಾಕ್‌ ಕಾಯಿದೆಯನ್ನು ಜಾರಿಗೆ ತರಬಯಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ; ಆದರೆ ಅದೇ ವೇಳೆ ಹಿಂದೂ ಸಹೋದರಿಯರನ್ನು ಕಡೆಗಣಿಸುತ್ತಾರೆ’ಎಂದು ಎಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next