Advertisement

ಅಫ್ಘಾನ್‌ನಲ್ಲಿ  ಭಾರತ-ಚೀನ ಜಂಟಿ ಯೋಜನೆ

06:00 AM Apr 29, 2018 | |

ವುಹಾನ್‌: ಅಫ್ಘಾನಿಸ್ಥಾನದಲ್ಲಿ ಜಂಟಿ ಆರ್ಥಿಕ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಶನಿವಾರ ನಿರ್ಧರಿಸಿದ್ದಾರೆ.

Advertisement

ಉಭಯ ನಾಯಕರ ಈ ಘೋಷಣೆ ಯಿಂದ ಪಾಕಿಸ್ಥಾನಕ್ಕೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕ್‌ ಚೀನವನ್ನು ತನ್ನ ಆತ್ಮೀಯನೆಂದೇ ಪರಿಗಣಿಸಿದೆ. ಆದರೆ ಈಗ ಅದು ಭಾರತದೊಂದಿಗೆ ಕೈಜೋಡಿಸುತ್ತಿದ್ದು, ಪಾಕ್‌ ಕಣ್ಣು ಕೆಂಪಗಾಗಿಸುವ ಸಾಧ್ಯತೆ ಇದೆ.  ಶನಿವಾರ ಅನೌಪಚಾರಿಕ ಮಾತುಕತೆ ವೇಳೆ ಯೋಜನೆ ಸಂಬಂಧ ಎರಡೂ ದೇಶಗಳ ಅಧಿಕಾರಿಗಳು ಯಾವ ರೀತಿ ಹೆಜ್ಜೆ ಇಡಬೇಕು ಎಂಬ ಬಗ್ಗೆ ಚರ್ಚಿಸ ಲಾಗಿದೆ. ಯುದ್ಧಗ್ರಸ್ತ ರಾಷ್ಟ್ರದಲ್ಲಿ ಭಾರತ- ಚೀನ ಕೈಗೊಳ್ಳುವ ಮೊದಲ ಯೋಜನೆ.

ಭೇಟಿಯ ಲಾಭವೇನು?
ಎರಡೂ ದೇಶಗಳ ಗಡಿ ಪ್ರಕ್ಷುಬ್ಧತೆ ತಣಿಸಲು ಯಶಸ್ವಿ
ಸುಸ್ಥಿರ ಹಾಗೂ ಪರಸ್ಪರ ಅನುಕೂಲಿ ಯಾಗಿ ಸಹಕಾರಕ್ಕೆ ಅಸ್ತು
ವಿವಾದಾತ್ಮಕ ವಿಚಾರಗಳಿಗೆ ಮಾತು ಕತೆ ಮೂಲಕ ಪರಿಹಾರದತ್ತ ಹೆಜ್ಜೆ
ದ್ವಿಪಕ್ಷೀಯ ವ್ಯಾಪಾರ, ಹೂಡಿಕೆಗೆ ಒತ್ತು
ಭಾರತ-ಚೀನ ಭವಿಷ್ಯದ ಸಂಬಂಧ ಗಟ್ಟಿಗೊಳಿಸಲು ನಾಂದಿ

ಈಸ್ಟ್‌ ಲೇಕ್‌ ದಂಡೆಯಲ್ಲಿ ಅರ್ಧ ತಾಸು ಕಾಲ ನಡೆದಾಡಿದ ಮೋದಿ ಮತ್ತು ಕ್ಸಿ  ಜಿನ್‌ಪಿಂಗ್‌
ಈಸ್ಟ್‌ ಲೇಕ್‌ನಲ್ಲಿ ಉಭಯರ ದೋಣಿ ವಿಹಾರ.
ದೋಣಿ ವಿಹಾರ ಮುಗಿಸಿ ಬಂದ ಮೇಲೂ ನಡೆಯಿತು ಚಾಯ್‌ ಪೇ ಚರ್ಚಾ.
1982ರ ಬಾಲಿವುಡ್‌ ಸಿನಿಮಾದ “ತೂ, ತೂ ಹೇ ವಹೀ ದಿಲ್‌ ನೆ ಜಿಸೆ ಅಪ್ನಾ ಕಹಾ’ ಹಾಡು ಕೇಳಿ ಆನಂದಿಸಿದ ನಾಯಕರು
ಭಾರತ ಪ್ರಧಾನಿಯ ಚೀನ ಭೇಟಿಯನ್ನು ಹಾಡಿ ಹೊಗಳಿದ ಚೀನೀ ಮಾಧ್ಯಮಗಳು

Advertisement

Udayavani is now on Telegram. Click here to join our channel and stay updated with the latest news.

Next