Advertisement

ಪ್ರಧಾನಿ ಮೋದಿ “ವಿಶ್ವದ ಪ್ರಭಾವಿ ವ್ಯಕ್ತಿ’

01:34 AM Jun 23, 2019 | Team Udayavani |

ಹೊಸದಿಲ್ಲಿ: 2019ರ ವಿಶ್ವದ ಪ್ರಭಾವಿ ವ್ಯಕ್ತಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್‌ನ‌ ನಿಯತಕಾಲಿಕೆ ಬ್ರಿಟಿಷ್‌ ಹೆರಾಲ್ಡ್‌ ಘೋಷಿಸಿದೆ. ಓದುಗರ ಆಯ್ಕೆ ಇದಾಗಿದ್ದು, ಮೋದಿ ಶೇ. 30.9ರಷ್ಟು ಮತಗಳನ್ನು ಗಳಿಸಿದ್ದರೆ. ರಷ್ಯಾ ಪ್ರಧಾನಿ ವ್ಲಾದಿಮಿರ್‌ ಪುಟಿನ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನೂ ಮೋದಿ ಹಿಂದಿಕ್ಕಿದ್ದಾರೆ. ಪುಟಿನ್‌ಗೆ ಶೇ. 29.9, ಟ್ರಂಪ್‌ಗೆ ಶೇ. 21.9 ಹಾಗೂ ಜಿನ್‌ಪಿಂಗ್‌ಗೆ ಶೇ. 18.1ರಷ್ಟು ಮತ ಗಳು ಲಭ್ಯವಾಗಿವೆ. ವಿಶ್ವದ ಪ್ರಮುಖ 25ಕ್ಕೂ ಹೆಚ್ಚು ನಾಯಕರನ್ನು ಈ ರೀಡರ್ಸ್‌ ಪೋಲ್‌ನಲ್ಲಿ ನಾಮನಿರ್ದೇಶನ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next