ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸೋಲುವ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ವಿದೇಶದಲ್ಲಿ ಆಶ್ರಯವನ್ನು ಹುಡುಕುತ್ತಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಅವರು ಭಾನುವಾರ ಹೇಳಿದ್ದಾರೆ.
ಲಾಲು ಪ್ರಸಾದ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ತಮ್ಮ ಹಿರಿಯ ಪುತ್ರ ಮತ್ತು ಬಿಹಾರದ ಸಚಿವ ತೇಜ್ ಪ್ರತಾಪ್ ಯಾದವ್ ಆಯೋಜಿಸಿದ್ದ ಸಮಾರಂಭದಲ್ಲಿ ಅಪರೂಪಕ್ಕೆ ಎಂಬಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.
‘ಬಾಬಾ ಸಾಹೇಬರ ಸಿದ್ಧಾಂತದ ಪಕ್ಷಗಳು ಒಗ್ಗೂಡುತ್ತಿವೆ, ಬಿಜೆಪಿ ಶೀಘ್ರದಲ್ಲೇ ಅಧಿಕಾರದಿಂದ ಹೊರಗುಳಿಯಲಿದೆ’ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಮೋದಿಯವರ “ಕ್ವಿಟ್ ಇಂಡಿಯಾ” ಹೇಳಿಕೆ ಕುರಿತು ಅವರ ಪ್ರತಿಕ್ರಿಯೆಯಾಗಿ ಲಾಲು ಈ ಹೇಳಿಕೆಯನ್ನು ನೀಡಿದ್ದಾರೆ.
ವಿಪಕ್ಷಗಳ ಹೊಸ ಒಕ್ಕೂಟ “ಇಂಡಿಯಾ”ವನ್ನು ರಚಿಸಿರುವ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ಬಗ್ಗೆ ಪ್ರಧಾನಿ ಆರೋಪಿಸಿದ್ದರು.