Advertisement

ಇಂದು ಕ್ಷಿಪಣಿ ಡೀಲ್‌ಗೆ ಸಹಿ

07:40 AM Oct 05, 2018 | Team Udayavani |

ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ 2 ದಿನಗಳ ಭಾರತ ಪ್ರವಾಸಕ್ಕಾಗಿ ನವದೆಹಲಿಗೆ ಗುರುವಾರ ಆಗಮಿಸಿದ್ದಾರೆ. ಶುಕ್ರವಾರ ನಡೆಯಲಿರುವ 19ನೇ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನದಲ್ಲಿ ಪುಟಿನ್‌ ಭಾಗವಹಿಸಲಿದ್ದು, ಇದಾದ ಬಳಿಕ 40 ಸಾವಿರ ಕೋಟಿ ರೂ. ವೆಚ್ಚದ ಎಸ್‌-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸುವ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಬಗ್ಗೆ ಅಮೆರಿಕ ಈಗಾಗಲೇ ಆಕ್ಷೇಪ ಮಾಡಿದೆ. ಗುರುವಾರ ಕೂಡ ಅಮೆರಿಕ ಡೀಲ್‌ಗೆ ಸಹಿ ಬೇಡ ಎಂದು ಎಚ್ಚರಿಕೆ ನೀಡಿದೆ. ಹೊರತಾಗಿಯೂ ಭಾರತ – ರಷ್ಯಾ ಡೀಲ್‌ ಅಂತಿಮಪಡಿಸಿ ಸಹಿ ಹಾಕಲು ನಿರ್ಧರಿಸಿವೆ.

Advertisement

ಇದೇ ವೇಳೆ, ಗುರುವಾರ ರಾತ್ರಿ ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಪುಟಿನ್‌ ಅವರಿಗಾಗಿಯೇ ವಿಶೇಷ ಔತಣಕೂಟ ಏರ್ಪಡಿಸಿದ್ದರು. ತದನಂತರ ಉಭಯ ನಾಯಕರು ದ್ವಿಪಕ್ಷೀಯ ಸಹಕಾರ ಕುರಿತು ಮಾತುಕತೆ ನಡೆಸಿದರು. ಅದಕ್ಕೂ ಮುನ್ನ ಲೋಕಕಲ್ಯಾಣ ಮಾರ್ಗ್‌ನ ನಿವಾಸಕ್ಕೆ ಪುಟಿನ್‌ ಆಗಮಿಸಿದಾಗ, ಅವರಿಗೆ ಮೋದಿ ಆಲಿಂಗನದ ಸ್ವಾಗತ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next