Advertisement

ಇಂದು ಮಂಗಳೂರಿಗೆ ಪ್ರಧಾನಿ ಮೋದಿ

07:37 AM Sep 02, 2022 | Team Udayavani |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದು ಸ್ವಾಗತಕ್ಕೆ ನಗರ ಸಜ್ಜುಗೊಂಡಿದೆ.

Advertisement

ಪ್ರಧಾನಿಯವರು ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಎಂಆರ್‌ಪಿಎಲ್‌ ಒಳಗೊಂಡಂತೆ 3,800 ಕೋ.ರೂ. ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಮಾವೇಶದಲ್ಲಿ ಮಾತನಾಡುವರು. ಇದೇ ಸಂದರ್ಭ ಕರಾವಳಿಗೆ ಹೊಸ ಯೋಜನೆಗಳನ್ನು ಪ್ರಕಟಿಸಿಯಾರೆಂಬುದು ಕರಾವಳಿಗರ ನಿರೀಕ್ಷೆ.

ಪ್ರಧಾನಿಯವರ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ನವಮಂಗ ಳೂರು ಬಂದರು ಪ್ರಾಧಿಕಾರದಿಂದ ಸರ್ವಸಿದ್ಧತೆ ನಡೆದಿದೆ. ಸಮಾವೇಶಕ್ಕೆ ಗೋಲ್ಡ್‌ಫಿಂಚ್‌ ಸಿಟಿ ಮೈದಾನ ಸಜ್ಜುಗೊಂಡಿದೆ. ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಎನ್‌ಎಂಪಿಎ ಪ್ರದೇಶ, ಸಮಾವೇಶ ತಾಣ ಹಾಗೂ ಅದರ ಸುತ್ತ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

ಅಪರಾಹ್ನ  1 ಗಂಟೆಗೆ ಆಗಮನ :

ಪ್ರಧಾನಿಯವರು ಅಪರಾಹ್ನ 1 ಗಂಟೆಗೆ ಕೊಚ್ಚಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ರಾಜ್ಯಪಾಲರು, ಮುಖ್ಯಮಂತ್ರಿ ಯವರು ಬರಮಾಡಿಕೊಳ್ಳುವರು. ಬಳಿಕ ಹೆಲಿಕಾಪ್ಟರ್‌ ಮೂಲಕ ಎನ್‌ಎಂ ಪಿಎಗೆ ಬಂದು, ಅಲ್ಲಿಂದರಸ್ತೆ ಮಾರ್ಗವಾಗಿ ಸಮಾವೇಶ ಸ್ಥಳಕ್ಕೆ  ಆಗಮಿಸುವರು. ಸಭಾಂಗಣದ ವೇದಿಕೆಯಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮೋದಿ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.

Advertisement

ವಿಕ್ರಾಂತ್‌ ಲೋಕಾರ್ಪಣೆ ಇಂದು :

ಮೊದಲ ಬಾರಿಗೆ ದೇಶೀಯ ವಾಗಿ ಕೊಚ್ಚಿ ಶಿಪ್‌ಯಾರ್ಡ್‌ ನಲ್ಲಿ ನಿರ್ಮಿಸಲಾದ ವಿಮಾನ ವಾಹಕ ನೌಕೆ “ಐಎನ್‌ಎಸ್‌ ವಿಕ್ರಾಂತ್‌’ ಅನ್ನು ಪ್ರಧಾನಿ ಮೋದಿ ಶುಕ್ರವಾರ ಸೇನೆಗೆ ಅರ್ಪಿಸುವರು. ಭಾರತೀಯ ನೌಕಾಪಡೆಯ ಹೊಸ ನಿಶಾನ್‌(ಧ್ವಜ)ವನ್ನೂ ಅನಾವರಣ ಮಾಡುವರು. ಗುರುವಾರವೇ ಪ್ರಧಾನಿ ಕೇರಳಕ್ಕೆ ಆಗಮಿಸಿ ಆದಿಶಂಕರಾಚಾರ್ಯರ ಜನ್ಮ ಸ್ಥಳ ಕಾಲಡಿಗೆ ಭೇಟಿ ನೀಡಿದರು. ಕೇರಳದ ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಮೋದಿಯವರನ್ನು ದೇಗುಲದ ಆಡಳಿತಾಧಿಕಾರಿ ಗಳು ಸ್ವಾಗತಿಸಿದರು.ಮೆಟ್ರೋ ಸೇರಿದಂತೆ ವಿವಿಧ ಯೋಜನೆ ಗಳಿಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next