ನವ ದೆಹಲಿ : 2019 ರ ಮೇನಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮಂತ್ರಿ ಮಂಡಲದಲ್ಲಿ ನಡೆಯುತ್ತಿರುವ ಮೊದಲ ಪುನರ್ ರಚನೆಗೆ ಕ್ಷಣ ಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರಿಂದ ರಾಜೀನಾಮೆ ಸಲ್ಲಿಕೆ ಕಾರ್ಯ ನಡೆಯುತ್ತಿದ್ದು, ಸಚಿವರಾದ ಡಿ.ವಿ.ಸದಾನಂದಗೌಡ, ಥಾವರ್ಚಂದ್ ಗೆಹಲೋತ್, ರತನ್‌ಲಾಲ್ ಕಟಾರಿಯಾ, ಪ್ರತಾಪ ಸಾರಂಗಿ, ಪೋಖ್ರಿಯಾಲ್, ಬಾಬುಲ್ ಸುಪ್ರಿಯೋ, ಡಾ.ಹರ್ಷವರ್ಧನ್, ಆಶ್ವಿನ್ ಚೌಬೆ ರಾಜೀನಾಮೆ ಸಲ್ಲಿಸಿದ್ದಾರೆ.
ಕೋವಿಡ್ ಸೋಂಕಿನ ಎರಡನೇ ಅಲೆ ನಿರ್ವಹಣೆ ಮಾಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಖಾತೆಯ ಇಬ್ಬರು ಸಚಿವರ ತಲೆದಂಡವಾಗಿದೆ. ಆರೋಗ್ಯ ಖಾತೆಯ ರಾಜ್ಯ ಸಚಿವ ಹಾಗೂ ಕ್ಯಾಬಿನೇಟ್ ಸಚಿವರಿಗೆ ಕೋಕ್ ನೀಡಲಾಗಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನ್ ಚೌಬೆ ರಾಜಿನಾಮೆ ನೀಡಿದ್ದಾರೆ.
ಇದನ್ನೂ ಓದಿ : BREAKING : ಕೇಂದ್ರ ಸಂಪುಟ ಪುನರ್ ರಚನೆ : ಸಚಿವರ ಪಟ್ಟಿ ರಿಲೀಸ್
ರಾಜೀನಾಮೆ ಸಲ್ಲಿಸಿರುವ ಸಚಿವರು
1) ರಮೇಶ ಪೊಕ್ರಿಯಾಲ್ 2) ಸಂತೋಷ ಗಂಗವರ್ 3) ದೇವೇಂದ್ರ ಚೌಧರಿ 4) ಸಂಜಯ 5) ಬಾಬುಲ್ ಸುಪ್ರಿಯೊ 6) ರಾವ್ ಸಾಹೇಬ್ ದಾನವೆ ಪಾಟೀಲ 7) ಸದಾನಂದಗೌಡ 8) ರತನ್ ಲಾಲ್ ಕಟಾರಿಯಾ 9) ಪ್ರತಾಪ್ ಸಾರಂಗಿ 10) ಡಾ ಹರ್ಷವರ್ಧನ 11) ಅಶ್ವಿನ್ ಚೌಬೆ 12) ತಾವರಚಂದ ಗೆಹ್ಲೋಟ್
ಇದನ್ನೂ ಓದಿ : ಸಂಪುಟ ಸರ್ಜರಿ : ಸಂಜೆ 6ಕ್ಕೆ ನಡೆಯುವ ಪ್ರಮಾಣ ವಚನದಲ್ಲಿ 43 ಮಂದಿ ಮೋದಿ ಟೀಮ್ ಗೆ ಎಂಟ್ರಿ..?