Advertisement

ಪ್ರಧಾನಿ ಮೋದಿಯಿಂದ 50 ಕೋಟಿ ಮತದಾರರ ಓಲೈಕೆ ಯತ್ನ

04:07 PM Jun 05, 2018 | udayavani editorial |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಬಡವರ್ಗದ ಮತದಾರರನ್ನು ಓಲೈಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಯೋಗಿಕ ನೆಲೆಯಲ್ಲಿ ದೇಶದ 50 ಕೋಟಿ ಕಾರ್ಮಿಕರ ಕಲ್ಯಾಣಕ್ಕಾಗಿ ಮೂರು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದ್ದಾರೆ.  

Advertisement

ಅವೆಂದರೆ ವೃದ್ಧಾಪ್ಯ ಪಿಂಚಣಿ, ಜೀವ ವಿಮೆ ಮತ್ತು ಹೆರಿಗೆ ಸೌಲಭ್ಯಗಳು. ಆದರೆ ನಿರುದ್ಯೋಗ, ಶಿಶು ಬೆಂಬಲ ಮತ್ತು ಇತರ ಲಾಭಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ ಎಂದು ಹೆಸರು ತಿಳಿಸಬಯಸದ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಈ ಮಹತ್ವಾಕಾಂಕ್ಷೀ ಯೋಜನೆಯನ್ನು ಪ್ರಾಯೋಗಿಕವಾಗಿ ದೇಶದ ಆರು ಆಯ್ದ ಜಿಲ್ಲೆಗಳಲ್ಲಿ ಅನುಷ್ಠಾನಿಸಲಾಗುವುದು. ಈ ಯೋಜನೆಗಳ ರೂಪರೇಖೆಯನ್ನು ಈಗ ಉನ್ನತ ಮಟ್ಟದಲ್ಲಿ ರೂಪಿಸುವ ದಿಶೆಯಲ್ಲಿ ಚರ್ಚೆ, ಚಿಂತನ ಮಂಥನ ನಡೆಯುತ್ತಿದೆ. 

ಆದರೆ ಮೋದಿ ಅವರ ಈ ಯೋಜನೆಯಿಂದ ದೇಶದ ಬೊಕ್ಕಸಕ್ಕೆ ಭಾರೀ ಹೊರೆ  ಉಂಟಾಗಲಿದ್ದು ಈಗಾಗಲೇ ಏಶ್ಯದಲ್ಲಿ ಅತೀ ದೊಡ್ಡ ವಿತ್ತೀಯ ಕೊರತೆ ಹೊಂದಿರುವ ದೇಶ ಎನಿಸಿಕೊಂಡಿರುವ ಭಾರತದ ಆರ್ಥಿಕತೆಗೆ ಇದೊಂದು ಸವಾಲಾಗಲಿದೆ ಎನ್ನಲಾಗಿದೆ. 

ಹಾಗಿದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸಂಘಟಿತ ಶಕ್ತಿಗೆ ಸವಾಲೊಡ್ಡಲು ಪ್ರಧಾನಿ ಮೋದಿಗೆ ಈ ಯೋಜನೆಯು ಒಂದು ಅಸ್ತ್ರವಾಗಿ ದೊರಕಲಿದೆ ಎಂದು ಹೇಳಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next