Advertisement

ಲತಾ ಮಂಗೇಶ್ಕರ್‌ ಸ್ಮರಣಾರ್ಥ ಮೊದಲ ಪ್ರಶಸ್ತಿ ಪ್ರಧಾನಿ ಮೋದಿಗೆ

09:07 PM Apr 23, 2022 | Team Udayavani |

ಮುಂಬೈ: ಈ ವರ್ಷಾರಂಭದಲ್ಲಿ ಮೃತಪಟ್ಟ ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಹೆಸರಿನಲ್ಲಿ ನೀಡಲಾಗುವ ಮೊದಲ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸ್ವೀಕರಿಸಲಿದ್ದಾರೆ.

Advertisement

ಲತಾ ದೀನಾನಾಥ್‌ ಮಂಗೇಶ್ಕರ್‌ ಹೆಸರಿನ ಪ್ರಶಸ್ತಿಯನ್ನು ಲತಾ ನಿಧನಾ ನಂತರ ಶುರು ಮಾಡಲಾಗಿದೆ. ಇದನ್ನು ಮಾಸ್ಟರ್‌ ದೀನನಾಥ್‌ ಮಂಗೇಶ್ಕರ್‌ ಸ್ಮತಿ ಪ್ರತಿಷ್ಠಾನ ಚಾರಿಟೇಬಲ್‌ ಟ್ರಸ್ಟ್‌ನಿಂದ ನೀಡಲಾಗುತ್ತದೆ.

“ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಸಾಧಿಸಿದೆ. ತಮ್ಮ ಅವಿರತ ಸೇವೆಯಿಂದಾಗಿ ಅವರೀಗ ವಿಶ್ವ ನಾಯಕರಾಗುವತ್ತ ಹೆಜ್ಜೆಯಿಟ್ಟಿದ್ದಾರೆ. ಇದನ್ನು ಪರಿಗಣಿಸಿ ಮೋದಿಯವರಿಗೆ ಲತಾ ಹೆಸರಿನ ಮೊದಲ ಪ್ರಶಸ್ತಿಯನ್ನು ನೀಡಲಾಗುತ್ತಿದೆ’ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next