Advertisement
ಈ ವೇಳೆ ಮಾತನಾಡಿದ ಮೋದಿ, ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಕ್ರಾಂತಿಯ ನೆನಪುಗಳನ್ನು ಮೆಲುಕು ಹಾಕಿದರು. ಇಸ್ಲಾಂ ಧರ್ಮದಲ್ಲಿರುವ ತ್ರಿವಳಿ ತಲಾಖ್‌ನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಮಹಾನ್ ದಾರ್ಶನಿಕನ ಹೋರಾಟದ ಹಾದಿಯನ್ನು ಅನುಸರಿಸುವಂತೆಯೂ ಕರೆ ನೀಡಿದರು. ಮಹಿಳಾ ಸಬಲೀಕರಣ ವಿಚಾರದಲ್ಲಿ ಬಸವಣ್ಣ ಅವರು ಮಾಡಿದ ಕ್ರಾಂತಿಯ ಬಗ್ಗೆ ಉಲ್ಲೇಖೀಸಿದ ಅವರು, ಬಸವಣ್ಣ ಇಡೀ ಜಗತ್ತಿಗೆ ಸುಧಾರಣೆಯ ದಾರಿ ತೋರಿದ್ದರು ಎಂದು ಹೇಳಿದರು.
Related Articles
ಬಸವಣ್ಣ ಅವರ ಈ ಬೃಹತ್ ವಚನ ಸಂಪುಟವನ್ನು ಕಳೆದ ವರ್ಷ ಧಾರವಾಡದಲ್ಲಿ ಹತ್ಯೆಗೀಡಾದ ಕನ್ನಡದ ವಿದ್ವಾಂಸ ಮತ್ತು ವಿಚಾರವಾದಿ ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿದ್ದರು. ಹೀಗಾಗಿ, ಇದರ ಬಿಡುಗಡೆ ವೇಳೆ, ಅವರು ಕುಟುಂಬಸ್ಥರೂ ವಿಜ್ಞಾನ ಭವನದಲ್ಲಿ ಹಾಜರಿದ್ದರು. ಕಾರ್ಯಕ್ರಮದ ವೇಳೆ, ಅವರ ಬಳಿಗೆ ತೆರಳಿದ ಮೋದಿ, ಕೆಲ ಹೊತ್ತು ಮಾತುಕತೆ ನಡೆಸಿದರು.
Advertisement
ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿ:“ಬಸವಣ್ಣನ ವಚನಗಳ ಬಗ್ಗೆ ಅಂತರ್ಜಾಲದಲ್ಲಿ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿ. ಎಲ್ಲಾ ಭಾಷೆಗಳಲ್ಲೂ ಇದನ್ನು ಏರ್ಪಡಿಸಿ. ಜಗತ್ತಿನ ಎಲ್ಲ ಆಸಕ್ತ ನಾಗರಿಕರು ಅದರಲ್ಲಿ ಭಾಗವಹಿಸಲಿ. ಇದರಿಂದ ವಚನಗಳ ಬಗ್ಗೆ ಇರುವ ಜ್ಞಾನ ವೃದ್ಧಿ ಆಗುವುದು ಎಂದು ಬಸವ ಸಮಿತಿಗೆ ಪ್ರಧಾನಿ ಸಲಹೆ ನೀಡಿದರು. “ಸಬ್ಕಾ ಸಾತ್ ಸಬ್ಕಾ ವಿಕಾಸ್’ ಯೋಜನೆಯ ಹರಿಕಾರರು ಬಸವಣ್ಣನವರೇ ಆಗಿದ್ದಾರೆ. ಅವರ ಅನುಭವ ಮಂಟಪ ಇದೆ ಮಾದರಿಯಲ್ಲಿ ಕಾರ್ಯ ನಿರ್ವಹಿಸಿದೆ. ಲಂಡನ್‌ನ ಥೇಮ್ಸ… ನದಿ ತೀರದಲ್ಲಿ ಬಸವೇಶ್ವರರ ಶಿಲ್ಪವನ್ನು ನಾನೇ ಉದ್ಘಾಟನೆ ಮಾಡಿ¨ªೆ. ಈಗ ಈ ವಚನಗಳನ್ನು 23 ಭಾಷೆಗಳಲ್ಲಿ ನಾನೇ ಲೋಕಾರ್ಪಣೆ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇನೆ” ಎಂದರು. ಈ ಕಾರ್ಯಕ್ರಮವನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಮಾಡಬೇಕು ಎಂದು ಸಲಹೆ ನೀಡಿದ್ದೇ ಮೋದಿ ಜೀ. ಅಸ್ಪ್ರಶ್ಯತೆ ಹೋಗಲಾಡಿಸಿ ಅಂತರ್ ಜಾತಿ ವಿವಾಹಗಳನ್ನು ಅಂದೇ ಬಸವಣ್ಣನವರು ಮಾಡಿಸಿದರು. ಸಂವಿಧಾನದಲ್ಲಿ ನೋಡುವ ಮುಖ್ಯ ಅಂಶಗಳನ್ನು ಅವರು ಅಂದೇ ರೂಢಿಸಿಕೊಂಡಿದ್ದರು.
– ಅನಂತ ಕುಮಾರ್, ಕೇಂದ್ರ ಸಂಸದೀಯ ಮತ್ತು ರಸಗೊಬ್ಬರ ಸಚಿವ. ಅಣ್ಣ ಬಸವಣ್ಣ ಅವರು ಜಗತ್ ಜ್ಯೋತಿ ಬಸವಣ್ಣರಾಗಿ ಜಗತ್ತಿಗೆ ಬೆಳಕಾದವರು. ಸಂಸದೀಯ ಪಾಠವನ್ನು ಅನುಭವ ಮಂಟಪದಲ್ಲಿ ಸ್ಥಾಪಿಸಿ ರಾಜ್ಯಭಾರ ಮಾಡಿದರು. ರಾಜ್ಯದ ಚಕ್ರವರ್ತಿಗಳಾಗಿ ಕೂಡ ಉತ್ತಮ ಆಡಳಿತವನ್ನು ನೀಡಿದರು. ಅವರ ವಚನಗಳನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಬಿಡುಗಡೆಗೊಳಿಸಿರುವುದು ಶ್ಲಾಘನೀಯ ಸಂಗತಿ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.