Advertisement
ವಿಶ್ವಶಾಂತಿಗೆ ಸಂಬಂಧಿಸಿ ಚರ್ಚೆಗಳೂ ನಡೆಯಲಿವೆ. ಮುಂದಿನ ವರ್ಷದ ಜಿ20 ನಾಯಕತ್ವ ಭಾರತಕ್ಕೆ ಸಿಗಲಿದ್ದು, ಒಂದು ವರ್ಷ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಅವರಿಂದ ಅಧ್ಯಕ್ಷ ಸ್ಥಾನ ಸ್ವೀಕರಿಸಲಿದ್ದಾರೆ.
– 45 ತಾಸುಗಳ ಇಂಡೋನೇಷ್ಯಾ ಪ್ರವಾಸದ ಅವಧಿಯಲ್ಲಿ 20 ಕಾರ್ಯಕ್ರಮಗಳಲ್ಲಿ ಭಾಗಿ.
– ಜಿ20 ರಾಷ್ಟ್ರಗಳ ಶೃಂಗದ ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮೂರು ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
– ಉಕ್ರೇನ್ ಮೇಲೆ ರಷ್ಯಾದ ದಾಳಿಯಿಂದ ಉಂಟಾಗುವ ಪ್ರತಿಕೂಲ ಪರಿಣಾಮದ ಬಗ್ಗೆ ಚರ್ಚೆ.
– ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಅವರಿಂದ ಸಾಂಕೇತಿಕವಾಗಿ ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಸ್ವೀಕಾರ.
– ಚೀನ ಅಧ್ಯಕ್ಷ ಕ್ಸಿಜಿನ್‌ಪಿಂಗ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಜಗತ್ತಿನ 10 ರಾಷ್ಟ್ರಗಳ ಮುಖ್ಯಸ್ಥರ ಜತೆಗೆ ಭೇಟಿ-ಮಾತುಕತೆ ಸಾಧ್ಯತೆ ಭಾಗವಹಿಸಲಿರುವ ಪ್ರಮುಖರು
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್, ಜರ್ಮನ್ ಚಾನ್ಸಲರ್ ಒಲಾಫ್ ಶಲ್ಜ್, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್.
Related Articles
ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟೆಲಿ, ಜಪಾನ್, ದ ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಟರ್ಕಿ, ಯು.ಕೆ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ. ಇದೊಂದು ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ಒಕ್ಕೂಟ. ಜಗತ್ತಿನ ಶೇ. 85 ಜಿಡಿಪಿ, ಜಗತ್ತಿನ ಶೇ. 75ರಷ್ಟು ಜಗತ್ತಿನ ವಾಣಿಜ್ಯ ವಹಿವಾಟು ಈ ದೇಶಗಳ ನಡುವೆ ನಡೆಯುತ್ತದೆ.
Advertisement
ಸಭೆ ಯಾವಾಗ?ನ. 14ರಿಂದ ನ. 16