Advertisement

ಸಿಕಂದರಾಬಾದ್: ನಾಳೆ ಚುನಾವಣಾ ರಣಕಹಳೆ ಮೊಳಗಿಸುವ ಪ್ರಧಾನಿ ಮೋದಿ

09:41 PM Jul 02, 2022 | Team Udayavani |

ಹೈದರಾಬಾದ್: ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಜುಲೈ 3 ರಂದು ಭಾನುವಾರ ಸಂಜೆ ‘ವಿಜಯ್ ಸಂಕಲ್ಪ ಸಭೆ’ ಎಂಬ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

Advertisement

ಸಭೆಯ ಶೀರ್ಷಿಕೆಯು ಸೂಚಿಸುವಂತೆ, ತೆಲಂಗಾಣದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಚುನಾವಣಾ ಸ್ಪರ್ಧೆಗೆ ಬಿಜೆಪಿ ಕಾರ್ಯಕರ್ತರನ್ನು ಸಿದ್ಧಪಡಿಸಲು ಪ್ರಧಾನಿ ಮೋದಿ ಚುನಾವಣಾ ವಿಚಾರಗಳನ್ನೇ ಧ್ವನಿಸಬಹುದು.

ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ಇಲ್ಲಿಗೆ ಬಂದಿಳಿದ ಮೋದಿ, ಭಾನುವಾರ ಸಂಜೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೇ 26 ರಂದು ನಗರಕ್ಕೆ ತಮ್ಮ ಕೊನೆಯ ಭೇಟಿಯ ಸಂದರ್ಭದಲ್ಲಿ, ಮೋದಿ ಅವರು ಪರೋಕ್ಷವಾಗಿ ಟಿ ಆರ್ ಎಸ್ ಪಕ್ಷವನ್ನು ಉಲ್ಲೇಖಿಸಿ, ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು, ‘ಪರಿವಾರವಾದಿ’ ಪ್ರಜಾಪ್ರಭುತ್ವದ “ಮಹಾ ಶತ್ರು” ಎಂದು ಹೇಳಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ರಾಜಕೀಯ ಪಂಡಿತರ ಪ್ರಕಾರ, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಮತ್ತು ಆಡಳಿತಾರೂಢ ಟಿಆರ್‌ಎಸ್ ವಿರುದ್ಧ ಮೋದಿ ವಾಗ್ದಾಳಿ ಮುಂದುವರಿಸುವ ಎಲ್ಲಾ ನಿರೀಕ್ಷೆಯಿದೆ.

Advertisement

ವಿಶೇಷ ಪೊಲೀಸ್ ಗ್ರೇಹೌಂಡ್ಸ್ ಮತ್ತು ಆಕ್ಟೋಪಸ್ ಸೇರಿದಂತೆ 3,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸಭೆಗೆ ನಿಯೋಜಿಸಲಾಗುವುದು ಎಂದು ಸಭೆಯ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಿದ ಯಡರಾಬಾದ್ ಪೊಲೀಸ್ ಆಯುಕ್ತ ಸಿ ವಿ ಆನಂದ್ ಶುಕ್ರವಾರ ತಿಳಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಐದು ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸಿದ್ದರು, ತೆಲಂಗಾಣ ರಾಷ್ಟ್ರ ಸಮಿತಿಯು ಸಂಸತ್ತಿನಲ್ಲಿ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಆಗಾಗ್ಗೆ ಬೆಂಬಲಿಸುತ್ತಿತ್ತು. ಈಗ ಬಿಜೆಪಿ ಮತ್ತು ಟಿಆರ್ ಎಸ್ ನಡುವೆ ಹೇಗೆ ಪರಿಸ್ಥಿತಿ ವೈರುಧ್ಯಕ್ಕೆ ತಿರುಗಿದೆ ಎಂಬುದರ ಸಂಕೇತವಾಗಿ, ರಾವ್ ಅವರು ಶನಿವಾರ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಾಗಿ ನಗರಕ್ಕೆ ಆಗಮಿಸಿದ ವೇಳೆ ವಿಧ್ಯುಕ್ತ ಸ್ವಾಗತವನ್ನು ನೀಡುವುದರಿಂದ ತಪ್ಪಿಸಿಕೊಂಡಿದ್ದಾರೆ.

ಕಾಕತಾಳೀಯ ಎನ್ನುವುದಕ್ಕಿಂತಲೂ ಹೆಚ್ಚಾಗಿ, ರಾವ್ ಅವರು ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದು, ಮೋದಿ ಬಂದ ದಿನವೇ ಸಿನ್ಹಾ ಇಲ್ಲಿಗೆ ಆಗಮಿಸಿದ್ದಾರೆ.

2019 ರಲ್ಲಿ ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಕೇಸರಿ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದು, ಮೊದಲು ಟಿಆರ್‌ಎಸ್ ಬಿಜೆಪಿಗೆ ಸ್ನೇಹಪರವಾಗಿತ್ತು. 2009 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಟಿಆರ್‌ಎಸ್ ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯ ಪಕ್ಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next