Advertisement
ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ನಿಂದ ಹೊಸದಿಲ್ಲಿಯ ವರೆಗೆ ಎಲ್ಲರೂ ಮಾತನಾಡಿಕೊಳ್ಳುವುದು ರಕ್ಷಣ ಪಡೆಗಳ ಮುಖ್ಯಸ್ಥ ಜ|ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿಯ ದುರ್ಮರಣದ ಬಗ್ಗೆಯೇ. ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣ ಅಕಾಡೆಮಿ ಕಾಲೇಜಿನಿಂದ ಹೊಸದಿಲ್ಲಿಗೆ ವಿಶೇಷ ವಿಮಾನದಲ್ಲಿ 13 ಮಂದಿಯ ಪಾರ್ಥಿವ ಶರೀರಗಳನ್ನು ಹೊಸ ದಿಲ್ಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ 7.35ಕ್ಕೆ ಸರಿಯಾಗಿ ಸಂಜೆ ಇಳಿಸಿದಾಗ ಅಲ್ಲಿ ಸಂತಾಪದ ವಾತಾವರಣವೇ ನಿರ್ಮಾಣವಾಗಿತ್ತು. ಐಎಎಫ್ನ ಸಿ-130ಜೆ ಸೂಪರ್ ಹಕ್ಯುìಲಸ್ ವಿಮಾನದಲ್ಲಿ ಪಾರ್ಥಿವ ಶರೀರಗಳನ್ನು ತರಲಾಯಿತು.
Related Articles
Advertisement
ಸಿಎಂ ಸ್ಟಾಲಿನ್ ಅಂತಿಮ ನಮನ:
ಬೆಳಗ್ಗೆ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣ ಅಕಾಡೆಮಿ ಕಾಲೇಜಿನಲ್ಲಿ ಕಾಪ್ಟರ್ ದುರಂತದಲ್ಲಿ ಅಸುನೀಗಿದ 13 ಮಂದಿಗೆ ಅಂತಿಮ ನಮನ ಸಲ್ಲಿಸಿದ್ದರು. ಅವರ ಜತೆಗೆ ತೆಲಂಗಾಣ ರಾಜ್ಯಪಾಲರಾಗಿರುವ ತಮಿಳ್‌ಸಲೈ ಸುಂದರರಾಜನ್ ಸೇರಿದಂತೆ ಪ್ರಮುಖರು ಗೌರವ ನಮನ ಸಲ್ಲಿಸಿದ್ದರು. ಅನಂತರ ಪಾರ್ಥಿವ ಶರೀರಗಳನ್ನು ಹೊಸದಿಲ್ಲಿಗೆ ಐಎಎಫ್ನ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಕಳುಹಿಸಿ ಕೊಡಲಾಗಿತ್ತು.
ನೀರು ಕೊಡಿ… ರಾವತ್ ಕಡೆಯ ಮಾತು :
“ನಾನು ಸೇನಾ ಪಡೆಗಳ ಮುಖ್ಯಸ್ಥ ರಾವತ್. ಸ್ವಲ್ಪ ನೀರು ಕೊಡುವಿರಾ”…. ತಾವು ಹುತಾತ್ಮರಾಗುವ ಮುನ್ನ ತಮ್ಮನ್ನು ರಕ್ಷಿಸಲು ಬಂದಿದ್ದ ತಮಿಳುನಾಡಿನ ಗ್ರಾಮಸ್ಥರಿಗೆ ರಕ್ಷಣ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಮನವಿ. ಇದು ಅವರಾಡಿದ ಕಡೆಯ ಮಾತು ಕೂಡ.
ನೀಲಗಿರಿ ದಟ್ಟಾರಣ್ಯದಲ್ಲಿ ಹೆಲಿಕಾಪ್ಟರ್ ಪತನವಾದ ನಂತರ ಹೆಲಿಕಾಪ್ಟರ್‌ನಲ್ಲಿದ್ದವರ ರಕ್ಷಣೆಗೆ ಧಾವಿಸಿ ಬಂದ ಸುತ್ತಲಿನ ಗ್ರಾಮಸ್ಥರು, ಕೆಲವರನ್ನು ಎತ್ತಿಕೊಂಡು ಹತ್ತಿರದ ಆಸ್ಪತ್ರೆಯತ್ತ ಸಾಗಿಸಲು ಮುಂದಾದರು. ಅವರು ಎತ್ತಿಕೊಂಡ ವ್ಯಕ್ತಿಗಳಲ್ಲೊಬ್ಬರು ರಾವತ್ ಆಗಿದ್ದರು. ಅವರ್ಯಾರು ಎಂದು ಗ್ರಾಮಸ್ಥರಿಗೆ ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಕ್ಷೀಣ ಧ್ವನಿಯಲ್ಲಿ ಮಾತನಾಡಿದ ರಾವತ್, ತಮ್ಮನ್ನು ರಾವತ್ ಎಂದು ಪರಿಚಯಿಸಿಕೊಂಡು ನೀರು ಕೊಡಿ ಎಂದು ಕೇಳಿದ್ದರು ಎಂದು ಅವರನ್ನು ಎತ್ತೂಯ್ಯುತ್ತಿದ್ದ ಗ್ರಾಮಸ್ಥರಲ್ಲೊಬ್ಬರಾದ ಎನ್.ಸಿ. ಮುರಳಿ ಎಂಬುವರು ಹೇಳಿದ್ದಾರೆ.
ಕೇಸು ದಾಖಲು :
ಕುನೂರ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ನೀಲಗಿರಿ ಜಿಲ್ಲೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಮುತ್ತುಮಾಣಿಕ್ಯಂ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಅದಕ್ಕೆ ಪೂರಕವಾಗಿ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೂವರ ದೇಹ ಮಾತ್ರ ಗುರುತು :
ಜ|ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರ ಪಾರ್ಥಿವ ಶರೀರಗಳನ್ನು ಮಾತ್ರ ಡಿಎನ್‌ಎ ಪರೀಕ್ಷೆ ಮೂಲಕ ದೃಢಪಡಿಸಲಾಗಿದೆ. ಉಳಿದವರ ದೇಹಗಳನ್ನು ಹೊಸದಿಲ್ಲಿಗೆ ತರಲಾಗಿದ್ದರೂ, ಅವುಗಳನ್ನು ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವೈಜ್ಞಾನಿಕ ಪರೀಕ್ಷೆ ಮೂಲಕ ದೃಢೀಕರಿಸಿದ ಬಳಿಕವಷ್ಟೇ ಅವುಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.