Advertisement

ಕೋವಿಡ್ ವಿರುದ್ಧ ಹೋರಾಟಕ್ಕೆ ಯೋಗದಿಂದ ಬಲ: ಪ್ರಧಾನಿ ನರೇಂದ್ರ ಮೋದಿ

08:25 AM Jun 21, 2021 | Team Udayavani |

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ವೈರಸ್ ವಿರುದ್ಧ ಹೋರಾಟದಲ್ಲಿ ಯೋಗವು ಜನರ ಆಂತರಿಕ ಶಕ್ತಿಯನ್ನು ತುಂಬಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

Advertisement

ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಡೀ ಜಗತ್ತು ಕೊವಿಡ್-19 ಸೋಂಕಿನಿಂದ ನರಳುತ್ತಿದೆ. ದೇಶದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಆದರೆ ಯೋಗ ದಿನದಂದು ಜನರ ಹುಮ್ಮಸ್ಸು, ಉತ್ಸಾಹ ಮತ್ತು ಯೋಗದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ ಎಂದರು.

ಕೋವಿಡ್ ಸೋಂಕು ಕಾಣಿಸಿಕೊಂಡಾಗ ಅದರ ವಿರುದ್ಧದ ಹೋರಾಡಲು ಯಾವುದೇ ದೇಶವು ಸಿದ್ಧವಾಗಿರಲಿಲ್ಲ. ಈ ಸಮಯದಲ್ಲಿ ಯೋಗವು ಆಂತರಿಕ ಶಕ್ತಿಯ ಮೂಲವಾಯಿತು. ಯೋಗವು ಸ್ವಯಂ ಶಿಸ್ತಿಗೆ ಸಹಾಯ ಮಾಡುತ್ತದೆ, ಈ ವೈರಸ್ ವಿರುದ್ಧ ಹೋರಾಡಬಹುದೆಂದು ಜನರಲ್ಲಿ ನಂಬಿಕೆಯನ್ನು ಹುಟ್ಟುಹಾಕಿತು. ಮುಂಚೂಣಿ ಯೋಧರು ವೈರಸ್ ವಿರುದ್ಧ ಹೋರಾಡುವಲ್ಲಿ ಯೋಗವನ್ನು ಒಂದು ಸಾಧನವನ್ನಾಗಿ ಮಾಡಿದ್ದಾರೆಂದು ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ:50 ಲಕ್ಷ ಲಸಿಕೆ ವಿತರಣೆ ಗುರಿ : ಇಂದಿನಿಂದ ದೇಶಾದ್ಯಂತ ಮೆಗಾ ಅಭಿಯಾನ ಕೇಂದ್ರದಿಂದ ಹಂಚಿಕೆ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹಯೋಗದೊಂದಿಗೆ ಎಂ-ಯೋಗ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದು, ಸಾಮಾನ್ಯ ಯೋಗ ಶಿಷ್ಟಾಚಾರದ ಆಧಾರದ ಮೇಲೆ ಯೋಗ ತರಬೇತಿಯ ಹಲವು ವೀಡಿಯೊಗಳು ವಿಶ್ವದ ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಪಿಎಂ ಮೋದಿ ಹೇಳಿದರು. ಇದು “ಒಂದು ಪ್ರಪಂಚ-ಒಂದು ಆರೋಗ್ಯ” ಎಂಬ ಧ್ಯೇಯವಾಕ್ಯವನ್ನು ಯಶಸ್ವಿಗೊಳಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

Advertisement

ವಿಶ್ವದ ಹೆಚ್ಚಿನ ದೇಶಗಳಿಗೆ, ಯೋಗ ದಿನವು ಹಳೆಯ-ಸಾಂಸ್ಕೃತಿಕ ಉತ್ಸವವಲ್ಲ. ಈ ಕಷ್ಟದ ಸಮಯದಲ್ಲಿ, ತುಂಬಾ ತೊಂದರೆಯಲ್ಲಿರುವ ಜನರು ಅದನ್ನು ಮರೆತು ಬಿಡಬಹುದು, ನಿರ್ಲಕ್ಷಿಸಬಹುದು. ಆದರೆ ಇದಕ್ಕೆ ವಿರುದ್ಧವಾಗಿ, ಯೋಗದ ಬಗ್ಗೆ ಜನರ ಉತ್ಸಾಹ ಹೆಚ್ಚಾಗಿದೆ, ಯೋಗದ ಮೇಲಿನ ಪ್ರೀತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next