Advertisement
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿ ಯಲ್ಲಿ ಮಾತನಾಡಿದ ಮೋದಿ, ಎಸ್‌ಸಿ, ಎಸ್‌ಟಿಗಳಿಗಿರುವ ಶೇ. 15 ಹಾಗೂ ಒಬಿಸಿಗಳ ಮೀಸಲನ್ನು ತಗ್ಗಿಸುವ ಯೋಜನೆಯನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಧರ್ಮದ ಆಧಾರದ ಮೇಲೆ ಈ ಹಿಂದೆ ಕರ್ನಾಟಕದಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು. ಬಳಿಕ ಬಿಜೆಪಿ ಸರಕಾರವು ಅದನ್ನು ರದ್ದು ಮಾಡಿತ್ತು ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ಅಕ್ರಮವಾಗಿ ಮುಸ್ಲಿಂ ಸಮುದಾಯದ ಜಾತಿಗಳನ್ನು ಒಬಿಸಿ ವರ್ಗಕ್ಕೆ ಸೇರಿಸಿದೆ. ಇದೇ ನೀತಿಯನ್ನು ಕಾಂಗ್ರೆಸ್ ದೇಶಾದ್ಯಂತ ಅನುಷ್ಠಾನಗೊಳಿಸುವ ಹುನ್ನಾರವನ್ನು ಮಾಡಿದೆ ಎಂದು ಮೋದಿ ಆರೋಪಿಸಿದರು.
Related Articles
Advertisement
ಸಂವಿಧಾನದಲ್ಲಿ ಅವಕಾಶ ವಿಲ್ಲದಿದ್ದರೂ ಈ ಹಿಂದೆ ಕಾಂಗ್ರೆಸ್ ಧರ್ಮಾಧಾರಿತ ಮೀಸಲು ನೀಡಿತ್ತು. 2004 ಮತ್ತು 2014ರ ಪ್ರಣಾಳಿಕೆಯಲ್ಲೂ ಧರ್ಮಾಧಾರಿತ ಮೀಸಲಾತಿಯ ಬಗ್ಗೆ ಪ್ರಸ್ತಾವಿಸಿತ್ತು. ಈಗ ಕರ್ನಾಟಕದಲ್ಲಿ ಹಿಂಬಾಗಿಲ ಮೂಲಕ ಧರ್ಮಾಧಾರಿತ ಮೀಸಲು ಕಲ್ಪಿಸುತ್ತಿದೆ. ಆ ಮೂಲಕ ಒಬಿಸಿ ಸಮುದಾಯದ ಮೀಸಲನ್ನು ಕಿತ್ತುಕೊಂಡಿದೆ ಎಂದು ಮೋದಿ ಆರೋಪಿಸಿದರು.
“ಒಬಿಸಿ ಕೆಟಗರಿಯಲ್ಲಿ ಮುಸ್ಲಿಮ್ ಜಾತಿಗಳನ್ನು ಸೇರಿಸುವ ಮೂಲಕ ಒಬಿಸಿಗಳಿಗೆ ದೊರೆಯುವ ಮೀಸಲು ಪ್ರಮಾಣವನ್ನು ತಗ್ಗಿಸುವ ಕೆಲಸವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡುತ್ತಿದೆ. ದೇಶಾದ್ಯಂತ ಕೂಡ ಇದೇ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ’ ಎಂದು ಹೇಳಿದರು.
ಕಾಂಗ್ರೆಸ್ ಒಬಿಸಿಗಳ ದೊಡ್ಡ ಶತ್ರುಕಾಂಗ್ರೆಸ್ ಅತ್ಯಂತ ಅಪಾಯಕಾರಿ ಆಟವನ್ನು ಆಡುತ್ತಿದೆ. ಇದು ನಿಮ್ಮ (ಒಬಿಸಿ) ಪೀಳಿಗೆಯನ್ನು ನಾಶ ಮಾಡಲಿದೆ. ಹೀಗಾಗಿ ಕಾಂಗ್ರೆಸ್ ಒಬಿಸಿಗಳ ಅತಿದೊಡ್ಡ ಶತ್ರುವಾಗಿದೆ. ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿಗಳಿಗೆ ನೀಡಲಾದ ಮೀಸಲಾತಿ ಉಳಿಯಬೇಕು ಎಂದರೆ ಈ ಚುನಾವಣೆಯಲ್ಲಿ ಬಿಜೆಪಿ 400 ಸೀಟು ಗೆಲ್ಲುವುದು ಅಗತ್ಯವಾಗಿದೆ ಎಂದು ಮೋದಿ ಹೇಳಿದರು.