Advertisement

ಈಗ ಭಾರತ-ಸಿಂಗಾಪುರ ನಡುವೆ ಡಿಜಿಟಲ್‌ ವಹಿವಾಟು ಸಾಧ್ಯ

07:27 PM Feb 21, 2023 | Team Udayavani |

ನವದೆಹಲಿ:”ಭಾರತದಲ್ಲಿ ಇತ್ತೀಚೆಗೆ ಯುಪಿಐ(ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌) ವಹಿವಾಟುಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಶೀಘ್ರದಲ್ಲೇ ನಗದು ವಹಿವಾಟನ್ನು ಡಿಜಿಟಲ್‌ ವಹಿವಾಟು ಮೀರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಭಾರತದ ಯುಪಿಐ ಹಾಗೂ ಸಿಂಗಾಪುರದ ಪೇನೌ ನಡುವೆ ಸಂಪರ್ಕ ಕಲ್ಪಿಸುವ ಆ ಮೂಲಕ ಎರಡೂ ದೇಶಗಳ ನಡುವೆ ಡಿಜಿಟಲ್‌ ವಹಿವಾಟು ಸಾಧ್ಯವಾಗಿಸುವಂಥ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವರ್ಚುವಲ್‌ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಸಿಂಗಾಪುರ ಪ್ರಧಾನಿ ಲೀ ಸಿಯನ್‌ ಲೂಂಗ್‌ ಅವರೂ ಉಪಸ್ಥಿತರಿದ್ದರು.

2022ರಲ್ಲಿ ಭಾರತದಲ್ಲಿ 126 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ 74 ಶತಕೋಟಿಯಷ್ಟು ವಹಿವಾಟುಗಳು ಯುಪಿಐ ಮೂಲಕ ನಡೆದಿದೆ. ಈಗ ಯುಪಿಐ-ಪೇನೌ ಲಿಂಕ್‌ ಮಾಡುವ ಮೂಲಕ ಭಾರತ-ಸಿಂಗಾಪುರ ಸಂಬಂಧದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾದಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಿಂಗಾಪುರ ಪ್ರಧಾನಿ ಲೀ ಸಿಯನ್‌ ಲೂಂಗ್‌, ಈಗ ಎರಡೂ ದೇಶಗಳ ನಾಗರಿಕರು ಅತ್ಯಂತ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಡಿಜಿಟಲ್‌ ವಹಿವಾಟು ನಡೆಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next