Advertisement
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲೆಕ್ಟ್ರಿಕಲ್ ಬಾಂಡ್ ಅನ್ನು ಆರ್‌ಟಿಐ ಮಾಹಿತಿ ಹಕ್ಕಿನಲ್ಲೂ ಕೊಡದಂತೆ ಕಾನೂನು ಜಾರಿ ಮಾಡಿದ್ದೀರಿ, ನೀವು ಯಾರ ಬಗ್ಗೆ ಮಾತನಾಡುತ್ತೀದ್ದೀರಿ ಎಂದು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Related Articles
Advertisement
ರಾಜ್ಯದಲ್ಲಿ ತೀವ್ರ ಬರ ಹಿನ್ನಲೆ, 200ಕ್ಕೂ ಹೆಚ್ಚು ತಾಲೂಕುಗಳನ್ನ ಬರ ಘೋಷಣೆ ಮಾಡಲಾಗಿದೆ. ಒಬ್ಬ ಕೇಂದ್ರ ಮಂತ್ರಿನೂ ರಾಜ್ಯಕ್ಕೆ ಭೇಟಿ ಕೊಡಲಿಲ್ಲ. ಬರ ಘೋಷಣೆ ಮಾಡಿ, ನಮ್ಮ ಮುಖ್ಯಮಂತ್ರಿಗಳು, ಪ್ರಧಾನಿ ಅವರನ್ನು ಭೇಟಿ ಮಾಡುತ್ತೇವೆಂದರೆ ಸಿಗಲಿಲ್ಲ. ಆದರೆ, ಬಿಜೆಪಿಯವರು ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದು, ಅವರಿಗೆ ಏನು ಹೇಳಬೇಕು ಎಂದು ವ್ಯಂಗ್ಯವಾಡಿದ ಸಚಿವರು, ಕನ್ನಡ ನಾಡಿನ ಬಗ್ಗೆ ಕೇಂದ್ರದವರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಹೆಲಿಕಾಪ್ಟರ್, ವಿಮಾನದ ಮೂಲಕವಾದರೂ ಬಂದು ಪರಿಶೀಲನೆ ಮಾಡಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೆಲವೆಡೆ ಹಸಿರು ಬರ ಮತ್ತು ಕೆಲವೆಡೆ ಒಣ ಬರ ಇದೆ. ಒಂದು ಹಂಗಾಮು ಹಾನಿಯಾದರೂ ಒಂದು ಬಿಡುಗಾಸು ಕೇಂದ್ರದಿಂದ ಪರಿಹಾರ ಕೊಟ್ಟಿಲ್ಲ. ಇಲ್ಲಿನ ವಸ್ತು ಸ್ಥಿತಿ ಅರಿತು ಕೂಡಲೇ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.