Advertisement

ನಮ್ಮ ಸಂವಿಧಾನ ಯಾವಾಗಲೂ ಪವಿತ್ರ ಪುಸ್ತಕ ಅಂತ ಪರಿಗಣಿಸ್ತೇವೆ; ಪ್ರಧಾನಿ ಮೋದಿ

09:49 AM Nov 28, 2019 | Nagendra Trasi |

ನವದೆಹಲಿ:ಭಾರತದ ಸಂವಿಧಾನ ಗೌರವ ಮತ್ತು ಭಾರತ, ಭಾರತೀಯರ ಒಗ್ಗಟ್ಟಿನ ನಿಲುವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ನ.26) ಸಂವಿಧಾನ ದಿನಾಚರಣೆ ಹಿನ್ನೆಲೆಯ ಲೋಕಸಭೆಯಲ್ಲಿ ವಿಶೇಷ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

Advertisement

ಭಾರತದಲ್ಲಿ ಸಂವಿಧಾನ ಅಳವಡಿಸಿಕೊಂಡ 70ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅದರಂತೆ ನಾವೀಗ ಜನರ ಹೊಣೆಗಾರಿಕೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

ಭಾರತದ ಸಂವಿಧಾನ ಜನರ ಕರ್ತವ್ಯ ಮತ್ತು ಹಕ್ಕುಗಳನ್ನು ಪ್ರತಿಪಾದಿಸಿದೆ. ಇದೀಗ ನಾವು ನಮ್ಮ ಸಂವಿಧಾನದ ಕರ್ತವ್ಯವನ್ನು ಹೇಗೆ ಈಡೇರಿಸಬಹುದು ಎಂಬ ಬಗ್ಗೆ ಆಲೋಚಿಸಬೇಕಾಗಿದೆ ಎಂದು ಮೋದಿ ಹೇಳಿದರು. ಅಲ್ಲದೇ ಭಾರತದ ಸಂವಿಧಾನದ ಮೇಲಿನ ವಿಶ್ವಾಸವನ್ನು ನಮ್ಮ ಜನರು ಯಾವತ್ತೂ ಬಿಟ್ಟುಕೊಟ್ಟಿಲ್ಲ ಇದಕ್ಕಾಗಿ ನಾನು 130 ಕೋಟಿ ಭಾರತೀಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಭಾರತದ ಸಂವಿಧಾನ ಒಂದು ಪವಿತ್ರ ಪುಸ್ತಕ ಎಂಬುದಾಗಿ ಜನರು ಪರಿಗಣಿಸಿದ್ದಾರೆ. ಜನರಿಗೆ ಬೆಳಕು ತೋರುವ ಮಾರ್ಗದರ್ಶಿಯಾಗಿದೆ. ಯಾರೇ ಆಗಲಿ ಸಂವಿಧಾನದ ಅಡಿಗಲ್ಲನ್ನು ಅಲುಗಾಡಿಸಲು ಯತ್ನಿಸಿದರೂ ಕೂಡಾ ದೇಶದ ಜನತೆ ಸಫಲರಾಗದಂತೆ ಮಾಡಿದ್ದಾರೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next